Street Dog : ಬೀದಿ ನಾಯಿಯ ಮೇಲೆ ಕಾಮುಕನಿಂದ ಅತ್ಯಾಚಾರ…!!
ಬೀದಿ ನಾಯಿಯ ಮೇಲೆ ಅತ್ಯಾಚಾರ
ಕಾಮುಕನ ಬಂಧನಕ್ಕೆ ಪೊಲೀಸರ ಕ್ರಮ
ಬಿಹಾರದ ಪಟ್ನಾದಲ್ಲಿ ಘಟನೆ
ಮಾರ್ಚ್ 8 , ಹೋಳಿ ಹಬ್ಬದ ದಿನ ಘಟನೆ
ಸಮಾಜಿಕ ಜಾಲತಾಣದಲ್ಲಿ ಕಾಮುಕ ಕೃತ್ಯ ವೈರಲ್
ಪ್ರಾಣಿ ದಯಾ ಸಂಘದವರಿಂದ ದೂರು ದಾಖಲು
ಫುಲ್ವಾರಿ ಶರೀಫ್‍ನ ಫೈಸಲ್ ಕಾಲೋನಿಯಲ್ಲಿ ಘಟನೆ
ಬಿಹಾರ : ಮಾರ್ಚ್ 8 ರ ಹೋಳಿ ಹಬ್ಬದಂದು ಕಾಮುಕನೋರ್ವ ಬೀದಿ ನಾಯಯಿಯ ಮೇಲೆ ಅತ್ಯಾಚಾರ ವೆಸಗಿದ್ದು , ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಕೃತ್ಯ ವೈರಲ್ ಆಗ್ತಿದ್ದು , ಭಾರೀ ವಿವಾದ ಎಬ್ಬಿಸಿದೆ. ನೆಟ್ಟಿಗರು , ಪ್ರಾಣಿ ಪ್ರಿಯರ ಕಣ್ ಕೆಂಪಾಗಿಸಿದೆ. ಆತನ ಬಂಧನಕ್ಕೆ ಒತ್ತಡ ಹೇರಲಾಗ್ತಿದೆ.
ಬಿಹಾರದ ಪಟ್ನಾದಲ್ಲಿರುವ ಫುಲ್ವಾರಿ ಶರೀಫ್‍ನ ಫೈಸಲ್ ಕಾಲೋನಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನು ನಾಯಿಯೊಂದಿಗೆ ಅಸಹಜ ಕೃತ್ಯದಲ್ಲಿ ತೊಡಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿದೆ. ತಕ್ಷಣ ಫುಲ್ವಾರಿ ಷರೀಫ್ ಪೊಲೀಸ್ ಠಾಣೆಗೆ ಪ್ರಾಣಿ ದಯಾಸಂಘದವರು ದೂರು ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥನನ್ನು ಬಂಧಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕುಮಾರ್ ತಿಳಿಸಿದ್ದಾರೆ.
Street Dog : Rape on street dog by a man in bihar’s patna