ಮಂಡ್ಯ: ಕೊರೊನಾ ಸೋಂಕಿತರನ್ನು ದಾಖಲು ಮಾಡಿಕೊಳ್ಳಲು ಹಾಸಿಗೆಗಳೇ ಇಲ್ಲ ಎನ್ನುತ್ತಿರುವ ಸರ್ಕಾರಿ ಆಸ್ಪತ್ರೆಗಳು ಮಂಡ್ಯದ ಜಿಲ್ಲಾಸ್ಪತ್ರೆ ಮಿಮ್ಸ್ನ ಕರ್ಮಕಾಂಡವನ್ನು ಒಮ್ಮೆಯಾದರೂ ನೋಡಲೇಬೇಕು. ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಆಸ್ಪತ್ರೆಯ ಪ್ರಸೂತಿ ವಾರ್ಡಿನಲ್ಲಿ ನಾಯಿಗಳದ್ದೆ ದರ್ಬಾರ್.
ಇಲ್ಲಿ ಮನುಷ್ಯರಿಗೆ ಚಿಕಿತ್ಸೆ ಪಡೆದುಕೊಳ್ಳಲು ಬೆಡ್‌ಗಲೇ ಇಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಸಬೂಬು ಹೇಳಿ ವಾಪಸ್ ಕಳಿಸ್ತಾರೆ. ಆದ್ರೆ, ವಾಸ್ತವ ಅಂದ್ರೆ ಖಾಲಿ ಬಿದ್ದಿರುವ ಬೆಡ್‌ಗಳ ಮೇಲೆ ಬೀದಿ ನಾಯಿಗಳು ಆರಾಮವಾಗಿ ಮಲಗಿ ನಿದ್ರಿಸುತ್ತವೆ. ಇದಕ್ಕೆಲ್ಲ ಆಸ್ಪತ್ರೆಯ ಸಿಬ್ಬಂದಿಗಳ ಬೇಜವಾಬ್ದಾರಿತನ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಇಲ್ಲಿ ಶುಚಿತ್ವ ಅನ್ನೋ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನರ್ಸ್ ಗಳು ಈ ವಾರ್ಡ್ಳ ನತ್ತ ತಲೆ ಹಾಕುವುದೂ ಇಲ್ಲ. ಹೀಗಾಗಿ ಈ ವಾರ್ಡ್ಗಳಲ್ಲಿ ನಿತ್ಯ ಬೀದಿ ನಾಯಿಗಳು ಬಂದು ಬೆಡ್ ಮೇಲೆ ಆರಾಮವಾಗಿ ವಿರಮಿಸುತ್ತವೆ.
ರೋಗ ವಾಸಿಯಾಗಲು ಆಸ್ಪತ್ರೆಗೆ ಹೋಗುವುದು ಸಹಜ, ಆದ್ರೆ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಯಾರಾದ್ರು ಬಂದ್ರೆ ವಾಪಸ್ ಹೋಗುವಾಗ ರೋಗವನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯದ ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ.
ನೂರಾರು ಅಧಿಕಾರಿಗಳು, ಸಿಬ್ಬಂದಿಗಳಿರುವ ಮಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಗೆ ಯಾವಾಗ ಕಾಯಕಲ್ಪ ಸಿಗುವುದೋ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel