ಚೀನಾ ಬಿಟ್ರೆ ಬೇರೆ ಯಾವ ದೇಶಗಳಲ್ಲೂ ಇಲ್ಲದ ಕಾನೂನುಗಳು..!

1 min read

ಚೀನಾ ಬಿಟ್ರೆ ಬೇರೆ ಯಾವ ದೇಶಗಳಲ್ಲೂ ಇಲ್ಲದ ಕಾನೂನುಗಳು..!

ರೂಲ್ಸ್ ಅಂಡ್ ರೆಗ್ಯುಲೇಷನ್ಸ್ ಕಾನೂನುಗಳನ್ನ ,ಆ ದೇಶದ ನಿಯಮಗಳನ್ನ ಪಾಲಿಸುವುದು ಆ ದೇಶದ ಪ್ರಜೆಗಳ ಕರ್ತವ್ಯ ಹಾಗೂ ಕಡ್ಡಾಯವಾಗಿರುತ್ತೆ. ಆದ್ರೆ ಕೆಲವೊಮ್ಮೆ ಕಠಿಣ ನಿಯಮಗಳನ್ನ ಪಾಲೀಸಲೇ ಬೇಕಾಗುತ್ತೆ. ಇಲ್ಲದೇ ಇದ್ದಲ್ಲಿ ಶಿಕ್ಷೆಯೂ ಕಟ್ಟಿಟ್ಟ ಬುತ್ತಿ. ಇಡೀ ವಿಶ್ವದ ಅನೇಕ ದೇಶಗಳಲ್ಲಿ ಇಂತಹದ್ದೇ ಕಾನೂನುಗಳಿವೆ. ಕಠಿಣ ಕಾನೂನುಗಳು ಅಂದ ತಕ್ಷಣ ನಾರ್ತ್ ಕೊರಿಯಾ ನೆನಪಾಗುತ್ತೆ. ಆದ್ರೆ ಚೀನಾದಲ್ಲಿಯೂ ಕೆಲ ಕಾನೂನುಗಳು ಆ ದೇಶ ಬಿಟ್ರೆ ಬೇರೆಲ್ಲೂ ಇಲ್ಲ.. ಅತ್ಯಂತ ಕಠಿಣವಾದ್ರೂ ಪಾಲೀಸಲೇಬೇಕಾದ ಪರಿಸ್ಥಿತಿ ಅಲ್ಲಿನ ಜನರಿಗಿದೆ. ಕಮ್ಯುನಿಸ್ಟ್ ಪಾರ್ಟಿಯ ಆಡಳಿತದಲ್ಲಿ ಅಲ್ಲಿನ ಜನರು ಒದ್ದಾಡುವಂತಾಗಿದೆ. ಪ್ರಸ್ತುತ ಚೀನಾ ಅಧಯಕ್ಷ ಷಿ ಜಿನ್ ಪಿಂಗ್ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಕಿವುಡ, ಮೂಕ ಬಾಲಕಿಯ ಮೇಲೆ ಅತ್ಯಾಚಾರಗೈದು ಆಕೆಯ ಕಣ್ಣನ್ನೂ ಹಾನಿಗೊಳಿಸಿದ ಪಾಪಿಗಳು ..!

ಭಾರತದಲ್ಲಿ ಅನೇಕ ವಿಚಾರಗಳಲ್ಲಿ ಸ್ವಾತಂತ್ರ ಇದೆ. ಆದ್ರೆ ಈ ವಿಚಾರದಲ್ಲಿ ನಾರ್ತ್ ಕೊರಿಯಾ ಹಾಗೂ ಚೀನಾ ಪ್ರಜೆಗಳು ನಿಜಕ್ಕೂ ದುರಾದೃಷ್ಟವಂತರೂ.. ಕ್ರೂರ ಆಡಳಿತಕ್ಕೆ ಸಿಲುಕಿರೋ ರಾಷ್ಟ್ರಗಳಲ್ಲಿ ಅಕ್ಕ ಪಕ್ಕ ನಿಲ್ಲುತ್ವೆ ಚೀನಾ ಉತ್ತರ ಕೊರಿಯಾ. ಒಂದೇ ನಾಣ್ಯದ 2 ಮುಖಗಳಿವೆ.  ಆದ್ರೆ ಭಾರತೀಯರು ನಿಜಕ್ಕೂ ಅದೃಷ್ಟವಂತರೇ… ನಾವು ಏನ್ ಮಾಡಬೇಕು.. ಎಲ್ಲಿ ಹೇಗೆ ಯಾವ ರೀತಿಯಲ್ಲಿ ಬದುಕಬೇಕು ಅನ್ನೋದನ್ನ ನಾವೇ ನಿರ್ಧಾರ ಮಾಡ್ತೇವೆ. ಆದ್ರೆ ಚೀನಾದ ಜನ ನಿಜಕ್ಕೂ ದುರಾದೃಷ್ಟವಂತರು. ಕೆಲ ಕಠಿಣ ಕಾನೂನುಗಳು ನಿಮಗೆ ಚೈನಾ ಬಿಟ್ರೆ ಬೇರ್ಯಾವ ದೇಶದಲ್ಲೂ ಸಿಗೋದಿಲ್ಲ.. ಅವುಗಳನ್ನ ನಾವೀಗ ನೋಡೋಣ.. ಅವುಗಳ ಬಗ್ಗೆ ತಿಳಿಯೋಣ..

ಹೌ ಕೌ ವ್ಯವಸ್ಥೆ : ಹೌ ಕೌ ವ್ಯವಸ್ಥೆ ಎಂದ್ರೆ ನೀವು ಎಲ್ಲಿ ವಾಸಿಸಬೇಕೆಂಬುದನ್ನ ನೀವು ಎಲ್ಲಿ ಜನಿಸಿದ್ದೀರಿ ಎಂಬುದರ ಮೇಲೆ ನಿರ್ಧರಿಸಲಾಗುತ್ತೆ. ಈ ನೀತಿಯನ್ವಯ ಯಾರಾದರೂ ತಮ್ಮ ನಿರ್ದಿಷ್ಟ ನಿವಾಸ ಎಂದು ಪಟ್ಟಿ ಮಾಡದ ಸ್ಥಳದಲ್ಲಿ ಮೂರು ದಿನಗಳಿಗಿಂತ ಹೆಚ್ಚು ದಿನ ಕಾಲ ಕಳೆಯಬೇಕಾದ್ರೆ ಅಂತಹವರು ತಾತ್ಕಾಲಿಕ ನಿವಾಸ ಪರವಾನಗಿಗೆ ಅರ್ಜಿ ಸಲ್ಲಿಸಬೇಕು.

ಹಿರಿಯರ ಹಕ್ಕುಗಳ ಕಾನೂನು : ಕಠಿಣ ಕಾನೂಗಳಾದರೂ, ಮಾರಕ ಕಾನೂನುಗಳಾದರೂ ಇದೊಂದು ಒಳ್ಳೆ ಕಾನೂನು ಚೀನಾದಲ್ಲಿದೆ ಎನ್ನಬಹುದು.  ಈ ಕೂನೂನಿನ ಅನ್ವಯ ವಯಸ್ಕ ಮಕ್ಕಳು ತಮ್ಮ ವಯಸ್ಸಾದ ತಂದೆ ತಾಯಿಯನ್ನ ಭೇಟಿ ಮಾಡುವುದು ಕಡ್ಡಾಯವಾಗಿದೆ.  ಒಂದು ವೇಳೆ ಹಿರಿಯ ತಂದೆ ತಾಯಿಯರನ್ನ ನಿರ್ಲಕ್ಷಿಸಿದರೆ ಕಠಿಣ ಕ್ರಮ ಕೈಗೊಳ್ಳಬಹುದಾಗಿದೆ.

ಇಂಟರ್ನೆಟ್ ವೀಕ್ಷಣೆಯ ನೀತಿ : ಚೀನಾ ಜನರಿಗೆ ಉಚಿತವಾಗಿ, ಮುಕ್ತವಾಗಿ ಇಂಟರ್ ನೆಟ್ ಬಳಸುವ ಹಕ್ಕಿಲ್ಲ. ಇಲ್ಲಿ ಸರ್ಕಾರದ ವತಿಯಿಂದ ಇಂಟರ್ ನೆಟ್ ಬಳಕೆಯ ಮೇಲೆ ನಿಯಂತ್ರಣವಿರುತ್ತದೆ. ಇಲ್ಲಿ ನವೀಕರಿಸಿದ ಇಂಟರ್ ವರ್ಷನ್ ಮಾತ್ರವೇ ಲಭ್ಯವಿದೆ. ಚೀನಾದಲ್ಲಿ ಲಭ್ಯವಿರುವ ಅಂತರ್ಜಾಲದ ಆವೃತ್ತಿಯ ಮೂಲಕ ಯಾವುದೇ ರೀತಿಯ ವಯಸ್ಕ ಅಥವ ಲೈಂಗಿಕ ಸಂಬಂಧದ ವಿಚಾರಗಳನ್ನ ನೋಡಲು ಅನುಮತಿ ಇಲ್ಲ. ಹಾಗೇ ಮಾಡಿದ ಪಕ್ಷದಲ್ಲಿ 3 ವರ್ಷ ಜೈಲು ಶಿಕ್ಷೆ ಖಾಯಂ.

ಅಮೆರಿಕಾದಲ್ಲಿ 70 ವರ್ಷಗಳ ಬಳಿಕ ಮಹಿಳಾ ಅಪರಾಧಿಗೆ ಮರಣದಂಡನೆ..!

ಹೇಡಿತನ ಪ್ರದರ್ಶಿಸಿದರೆ ಅಥವ  ಶರಣಾದರೆ ಚೀನಾ ಸೈನಿಕರಿಗೆ ಮರಣದಂಡನೆ ಶಿಕ್ಷೆ :  ಅಕಸ್ಮಾತಾಗಿ ಚೀನಾ ಸೈನಿಕರು ಹೇಡಿತನ ಪ್ರದರ್ಶಿಸಿದರೆ ಅಥವಾ ಶರಣಾಗತಿಯಾದ್ರೆ ಅಂತಹ ಸೈನಿಕರಿಗೆ ಮರಣದಂಡನೆ ವಿಧಿಸುವ ಕಾನೂನು ಚೀನಾದಲ್ಲಿದೆ. ಸಾಮಾನ್ಯವಾಗಿ ಭಾರತ ಅಥವಾ ಇತರೇ ರಾಷ್ಟ್ರಗಳಲ್ಲಿ  ಮರಣದಂಡನೆಯನ್ನು ಹೆಚ್ಚಾಗಿ ಕೊಲೆಯಂತಹ ಗಂಭೀರ ಅಪರಾಧಗಳಿಗೆ ನೀಡಲಾಗುತ್ತದೆ. ಆದ್ರೆ  ಚೀನಾದಲ್ಲಿ  ಸೈನಿಕರು ಕರ್ತವ್ಯವನ್ನು ಉಲ್ಲಂಘಿಸುವುದು. ಮಿಲಿಟರಿ ರಹಸ್ಯಗಳನ್ನು ಮಾರಾಟ ಮಾಡುವುದು, ಆದೇಶಗಳನ್ನು ರವಾನಿಸಲು ಮರುಬಳಕೆ ಮಾಡುವುದು, ಶರಣಾಗತಿ ಅಥವಾ ಹೇಡಿತನ ಮುಂತಾದವುಗಳನ್ನ ಮಾಡಿದ್ದು ಕಂಡು ಬಂದ್ರೆ ಅವರು ಮರಣದಂಡನೆ ಶಿಕ್ಷೆಗೆ ಒಳಪಡುತ್ತಾರೆ.

ಹೀಗೆ ಇನ್ನೂ ಹತ್ತಾರು ಕೂನೂನುಗಳಿವೆ. ಒಟ್ಟಾರೆ ಚೀನಾ ಆಗಿರಲಿ ನಾರ್ತ್ ಕೊರಿಯಾ ಆಗಿರಲಿ ಭಾರತ ಯಾವಾಗಲೇ ಬೆಸ್ಟ್ , ಭಾರತೀಯರೇ ಅದೃಷ್ಟವಂತರೂ ಅನ್ನೋದು ನನ್ನ ಅಭಿಪ್ರಾಯ.

ಇನ್ನೂ ಕಾನೂನುಗಳನ್ನ ಬಿಟ್ಟು ಚೀನಾ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ರೆ ಜನರಿಗೆ ಎಂತಹ ಹೀನಾಯ ಪರಿಸ್ಥಿತಿ ಬರುತ್ತೆ ಅನ್ನೋ ವಿಚಾರ ಎಲ್ರಿಗೂ ಗೊತ್ತಿರೋದೆ. ಅದಕ್ಕೆ ಕೊರೋನಾ ಸ್ಥಿತಿಗತಿಗಳು ತಾಜಾ ಉದಾಹರಣೆ ಎನ್ನಬಹುದು ಯಾಕಂದ್ರೆ ಚೀನಾದ ವುಹಾನ್ ನಲ್ಲಿ ಜನ್ಮ ತಳಿ ಇಡೀ ವಿಶ್ವವನ್ನೇ ನಡುಗಿಸಿರುವ ಕೋವಿಡ್ ವೈರಸ್ ಹಾಗೂ ಚೀನಾದ ಸ್ಥಿತಿಗತಿ ಬಗ್ಗೆ ಮಾತನಾಡಿ, ಅದರ ವಿರುದ್ಧ ಧ್ವನಿ ಎತ್ತಿ ಚೀನಾದ ಅಸಲಿ ಮುಖವಾಡವನ್ನ  ವಿಶ್ವದ ಮುಂದೆ ಕಳಚಿದ ಅನೇಕ ಜರ್ನಲಿಸ್ಟ್ ಗಳನ್ನ ನಾಪತ್ತೆ ಮಾಡಿಸಿ, ಜನರಿಗೆ, ಸೋಂಕಿತರಿಗೆ ಹಿಂಸಿಸಿರುವುದು, ವಿಜ್ಞಾನಿಗಳನ್ನೇ ನಾಪತ್ತೆಯಾಗಿಸಿದ್ದು ಎಲ್ರಿಗೂ ಗೊತ್ತಿರೋ ವಿಚಾರವೇ.

ಅಷ್ಟೇ ಯಾಕೆ ಚೀನಾದ ಆಗರ್ಭ ಶ್ರೀಮಂತ ಅಲಿಬಾಬಾ ಸಂಸಸ್ತಾಪಕ ಜಾಕ್ ಮಾ ಚೀನಾ ವಿರುದ್ಧ ಸಂಘರ್ಷ ಸಾರಿದ್ದ ಬೆನ್ನಲ್ಲೇ ಜಾಕ್ ಮಾ ನಾಪತ್ತೆಯಾಗಿದ್ದು, ಅವರ ಹಿಂದೆಯೂ ಚೀನಾ ಕೈವಾಡವಿದೆ ಅನ್ನೋದು ಸದ್ಯಕ್ಕೆ ಚರ್ಚೆಯಲ್ಲಿವೆ.

ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd