ಜಮ್ಮುಕಾಶ್ಮೀರ, ನೋಯ್ಡಾದಲ್ಲಿ ನಡುಗಿದ ಭೂಮಿ. 5.7 ರಷ್ಟು ತೀವ್ರತೆ…
ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಶನಿವಾರ ಬೆಳಗ್ಗೆ 9.49ಕ್ಕೆ ಭೂಮಿ ಕಂಪಿಸಿದೆ. ದೆಹಲಿ-ಎನ್‌ಸಿಆರ್ (ನೋಯ್ಡಾ) ಮತ್ತು ಚಂಡೀಗಢದಲ್ಲಿ ಭೂಕಂಪನದ ನಂತರ, ಜನರು ಭಯದಿಂದ ಮನೆಗಳಿಂದ ಹೊರಬಂದಿದ್ದಾರೆ. ಭೂಕಂಪದಿಂದಾಗಿ ಇದುವರೆಗೆ ಯಾವುದೇ ಜೀವ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ.
ಪಾಕಿಸ್ತಾನದಲ್ಲಿ 5.7 ತೀವ್ರತೆಯ ಭೂಕಂಪನ ವರದಿಯಾಗಿದೆ.
ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನ ಮತ್ತು ತಜಕಿಸ್ತಾನ್ ಗಡಿಯಲ್ಲಿರುವ ಹಿಂದೂಕುಶ್ ಬೆಟ್ಟಗಳ ಸಮೀಪದಲ್ಲಿದೆ. ಪಾಕಿಸ್ತಾನದಲ್ಲಿ ಭೂಕಂಪದ ತೀವ್ರತೆ 7.3 ರಷ್ಟಿತ್ತು ಮತ್ತು ಅದರ ಕೇಂದ್ರಬಿಂದು ಇಸ್ಲಾಮಾಬಾದ್‌ನಿಂದ 189 ಕಿಮೀ ದೂರದಲ್ಲಿದೆ ಎಂದು ಮೊದಲು ವರದಿಯಾಗಿದೆ. ನಂತರ ಭೂಕಂಪನದ ಕೇಂದ್ರಬಿಂದು ಅಫ್ಘಾನಿಸ್ತಾನ-ತಜಕಿಸ್ತಾನ್ ಗಡಿಯಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ತಿಳಿಸಿದೆ.
ಇತ್ತೀಚೆಗೆ ಈಶಾನ್ಯ ಭಾರತ ಮತ್ತು ಪರ್ವತ ಶ್ರೇಣಿಗಳಲ್ಲಿ ಪದೇ ಪದೇ ಭೂಕಂಪನದ ಅನುಭವಗಳಾಗುತ್ತಿವೆ.