10ನೇ ತರಗತಿ ಪರೀಕ್ಷೆ ಬರೆಯುವ ಸಮಯದಲ್ಲಿಯೇ ಮಗುವಿಗೆ ಜನ್ಮ ..!
ಬಿಹಾರ್ : 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ವೇಳೆಯೇ 20 ವರ್ಷದ ಯುವತಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಬಿಹಾರದ ಮುಜಾಫರ್ ನಲ್ಲಿ ನಡೆದಿದೆ. ಶಾಂತಿ ದೇವಿ ಎಂಬ ಯುವತಿ ಮಹಾಂತ್ ದರ್ಶನ್ ದಾಸ್ ಮಹಿಳಾ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಪ್ರಸವ ವೇದನೆ ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಕಾಶ್ಮೀರದಲ್ಲಿ ನೆತ್ತರು ಹರಿಯೋದು ನಿಲ್ಲಿಬೇಕೆಂದ್ರೆ ಪಾಕ್ ನೊಂದಿಗೆ ಕೇಂದ್ರ ಮಾತುಕತೆ ಆರಂಭಿಸಬೇಕು – ಮಫ್ತಿ
ಈ ಕುರಿತು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮಾತನಾಡಿ, ಕಾಲೇಜಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಹೀಗಾಗಿ ಶಾಂತಿದೇವಿ ಕೂಡ ಪರೀಕ್ಷೆ ಬರೆಯಲು ಆಗಮಿಸಿದ್ದರು. ಬರೆಯುತ್ತಿದ್ದ ಸಂದರ್ಭದಲ್ಲಿಯೇ ಪ್ರಸವ ವೇದನೆಗೆ ಒಳಗಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಇನ್ನೂ ಪರೀಕ್ಷೆ ದಿನವೇ ಮಗುವಿಗೆ ಜನ್ಮ ನೀಡಿದ ಹಿನ್ನೆಲೆ ಆಕೆ ತನ್ನ ಮಗುವಿಗೆ ಪರೀಕ್ಷೆಯ ಹೆಸರೇ ಇಟ್ಟಿದ್ದಾಳೆ. ಇಮ್ತಿಹಾನ್ ( ಪರೀಕ್ಷೆ) ಎಂಬ ಹೆಸರನ್ನ ಮಗುವಿಗೆ ನಾಮಕರಣ ಮಾಡಿದ್ದಾಳೆ. ಸದ್ಯ ಯುವತಿ ಹಾಗೂ ಮಗು ಆರೋಗ್ಯವಾಗಿದ್ದಾಳೆ ಎನ್ನಲಾಗಿದೆ. ಇತ್ತ ಯುವತಿ ಮೊದಲೇ ಅಂದ್ರೆ ನೋವು ಪ್ರಾರಂಭವಾಗುವ ಮೊದಲು ಆಕೆ ಟಿಕ್ ಮಾದರಿಯ ಪ್ರಶ್ನೆಗಳನ್ನು ಮುಗಿಸಿದ್ದಳು ಎಂದು ತಿಳಿದುಬಂದಿದೆ.