ರಾಯಚೂರು: ವಿದ್ಯಾರ್ಥಿಯೋರ್ವ ಲೋ ಬಿಪಿಯಿಂದಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಖಾಸಗಿ ಶಾಲೆಯ (School)ಲ್ಲಿ ಪಾಠ ನಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯೋರ್ವ (Student) ಕುಸಿದು ಬಿದ್ದು ಹೃದಯಾಘಾತದಿಂದ (Heart Attack) ಬಾಲಕ ಸಾವನ್ನಪ್ಪಿದ್ದಾರೆ.
ಈ ಘಟನೆ ರಾಯಚೂರು (Raichur) ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿದೆ. ತರುಣ್ ಅತ್ತನೂರು (14) ಸಾವನ್ನಪ್ಪಿರುವ ದುರ್ದೈವಿ. ಸಿರವಾರ (Sirawara) ತಾಲೂಕಿನ ಅತ್ತನೂರು ಗ್ರಾಮದ ಎಂಟನೇ ತರಗತಿ ವಿದ್ಯಾರ್ಥಿ ತರುಣ್ ಎಂದಿನಂತೆ ಶಾಲೆಗೆ ಆಗಮಿಸಿದ್ದ. ಶಾಲೆಯಲ್ಲಿ ಲೋ ಬಿಪಿಯಿಂದ ಏಕಾಏಕಿ ಕುಸಿದು ಬಿದ್ದಿದ್ದಾನೆ.
ಕೂಡಲೇ ವಿದ್ಯಾರ್ಥಿಯನ್ನು ಶಿಕ್ಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ಕರೆತರುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಹೃದಯಾಘಾತದಿಂದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.