ಕಲಬುರಗಿ: ವಿದ್ಯಾರ್ಥಿಯೊಬ್ಬಾತ ಸರಸ್ವತಿ ಪೂಜೆಗೆ ವಿರೋಧ ವ್ಯಕ್ತಪಡಿಸಿರುವ ಘಟನೆಯೊಂದು ನಡೆದಿದೆ.
ಕಲಬುರಗಿ ಕೇಂದ್ರ ವಿಶ್ವ ವಿದ್ಯಾಲಯದ ಗ್ರಂಥಾಲಯದಲ್ಲಿ ಸರಸ್ವತಿ ಪೂಜೆಗೆ ಈ ರೀತಿ ವಿರೋಧ ಮಾಡಲಾಗಿದೆ. ವಸಂತ ಪಂಚಮಿ ಹಿನ್ನಲೆಯಲ್ಲಿ ಗ್ರಂಥಾಲಯದಲ್ಲಿನ ಸರಸ್ವತಿಗೆ ಪೂಜೆ ಮಾಡಲಾಗುತ್ತಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ವಿದ್ಯಾರ್ಥಿ ನಂದಕುಮಾರ್ ಅಡ್ಡಿಪಡಿಸಿದ್ದಾನೆ.
ನಂದಕುಮಾರ್, ‘ಇದೇನೂ ದೇವಸ್ಥಾನವೋ, ವಿಶ್ವವಿದ್ಯಾಲಯವೋ ಎಂದು ವಿದ್ಯಾ ದೇವತೆ ಸರಸ್ವತಿ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾನೆ. ವಿದ್ಯಾರ್ಥಿಯ ಈ ನಡೆಗೆ ಸದ್ಯ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಶೋಧನಾ ವಿದ್ಯಾರ್ಥಿ ನಂದಕುಮಾರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.








