ಹೈಕೋರ್ಟ್ ಆದೇಶ ಮೀರಿ ಶಾಲೆಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು Saaksha Tv
ಕಲಬುರಗಿ: ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಶಾಲೆಗೆ ಆಗಮಿಸಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ರಸ್ತೆಯಲ್ಲಿರೋ ಉರ್ದು ಶಾಲೆಯಲ್ಲಿ ನಡೆದಿದೆ.
ಹಿಜಾಬ್ – ಕೇಸರಿ ಶಾಲು ಧಾರಣೆ ಸಂಬಂಧ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಆದರೆ ಈ ಆದೇಶವನ್ನು ಉಲ್ಲಂಘಿಸಿ ಹಿಜಾಬ್ ಧರಿಸಿಯೇ ಶಾಲೆಗೆ ವಿದ್ಯಾರ್ಥಿನಿಯರು ಆಗಮಿಸಿದ್ದಾರೆ. ಇಲ್ಲಿಯ ಹಳೆ ಉರ್ದು ಪ್ರೌಢಶಾಲೆಯಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಆಗಮಿಸಿ, ಶಾಲಾ ಕೊಠಡಿಯಲ್ಲಿ ಕುಳಿತಿದ್ದರು.
ಮಾಧ್ಯಮದವರು ಆಗಮಿಸುತ್ತಿದ್ದಂತೆ ಎಚ್ಚೆತ್ತ ಶಿಕ್ಷಕರು, ತಕ್ಷಣ ಕ್ಲಾಸ್ ರೂಮ್ಗೆ ಆಗಮಿಸಿ ಹಿಜಾಬ್ ತೆಗೆಯುವಂತೆ ಸೂಚನೆ ನೀಡಿದ್ದಾರೆ. ಶಿಕ್ಷಕರ ಸೂಚನೆ ಮೇರೆಗೆ ಹಿಜಾಬ್ ತೆಗೆದು ವಿದ್ಯಾರ್ಥಿನಿಯರು ಎಕ್ಸಾಂ ಬರೆಯುತ್ತಿದ್ದಾರೆ.
‘ವಿದ್ಯಾರ್ಥಿನಿಯರು ಹಳ್ಳಿಗಳಿಂದ ಬಂದಿದ್ದು, ಅವರಿಗೆ ಹೈಕೋರ್ಟ್ ಆದೇಶದ ಮಾಹಿತಿ ಇಲ್ಲದ ಕಾರಣ ಕ್ಲಾಸ್ ರೂಮ್ಲ್ಲಿ ಹಿಜಾಬ್ ಧರಿಸಿಯೇ ಕುಳಿತಿದ್ದಾರೆ. ಈ ವಿಷಯ ಶಿಕ್ಷಕರ ಗಮನಕ್ಕೆ ಬರುತ್ತಿದಂತೆ ಹಿಜಾಬ್ ತೆಗೆಸಲಾಗಿದೆ. ಹೈಕೋರ್ಟ್ ಆದೇಶ ಉಲ್ಲಂಘನೆ ಆಗಿಲ್ಲ’ ಅಂತಾ ಶಾಲೆಯ ಶಿಕ್ಷಕ ಶಿವಾನಂದ ತಿಳಿಸಿದ್ದಾರೆ.