Basvaraj Bommai: ಸಿಎಂ ಕಾರು ತಡೆದು ಮನವಿ ಪತ್ರ ನೀಡಿದ ವಿದ್ಯಾರ್ಥಿನಿಯರು

1 min read
CM Bommai Saaksha Tv

ಸಿಎಂ ಕಾರು ತಡೆದು ಮನವಿ ಪತ್ರ ನೀಡಿದ ವಿದ್ಯಾರ್ಥಿನಿಯರು

ಹಾವೇರಿ:  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೋಗುತ್ತಿದ್ದ ಕಾರು ತಡೆದು, ನಮ್ಮ ಊರಿಗೆ ಸರಿಯಾಗಿ ಬಸ್ ಬರುತ್ತಿಲ್ಲ, ಬಸ್ ಬಿಡುವಂತೆ ವಿದ್ಯಾರ್ಥನಿಯರು ಮನವಿ ಪತ್ರ ನೀಡಿದರು.

ಸಿಎಂ ತವರು ಜಿಲ್ಲೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಿಮ್ಮಾಪುರ ಗ್ರಾಮಕ್ಕೆ ಬೊಮ್ಮಾಯಿ ಅವರು ಶನಿವಾರ ಆಗಮಿಸಿದ್ದರು. ಗ್ರಾಮ ದೇವತೆ ಮಲಿಯಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ನಂತರ ಗ್ರಾಮದಲ್ಲಿ ಕಂದಾಯ ದಾಖಲೆಗಳು ಮನೆಮನೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿಯಾಗಲು ಹೊರಡಡುವಾಗ ವಿದ್ಯಾರ್ಥಿನಿಯರ ಗುಂಪು ಕಾರನ್ನು ತಡೆದು ತಮ್ಮ ಅಹವಾಲು ತೋಡಿಕೊಂಡರು.

CM Bommai Saaksha Tv

ಈ ವೇಳೆ ವಿದ್ಯಾರ್ಥಿನಿಯರು, ಬಸ್ ಇಲ್ಲದ ಕಾರಣ ನಾವು ಶಾಲೆಗೆ ಪ್ರತಿದಿನ ತೀರ್ಥ ಗ್ರಾಮದಿಂದ ನಾಲ್ಕೈದು ಕಿ.ಮೀ ನಡೆದುಕೊಂಡು ಹೋಗಬೇಕಾಗುತ್ತದೆ. ಇದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ. ಅದಕ್ಕೆ ನೀವು ನಮ್ಮ ಗ್ರಾಮಕ್ಕೆ ಬಸ್ ಬಿಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಬೊಮ್ಮಾಯಿ ಅವರು ವಿದ್ಯಾರ್ಥಿನಿಯರ ಮನವಿ ಸ್ವೀಕರಿಸಿದ್ದು, ಬಸ್ ಬಿಡಿಸುವ ಭರವಸೆ ನೀಡಿದ್ದಾರೆ.

ಇದೇ ವೇಳೆ ವಿದ್ಯಾರ್ಥಿನಿಯರು, ಕೋವಿಡ್ ಸಮಯದಿಂದ ನಮಗೆ ಸೈಕಲ್‍ಗಳೂ ಬಂದಿಲ್ಲ ಎಂದು ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಬೊಮ್ಮಾಯಿ ಅವರು ವಿಶ್ವಾಸ ನೀಡಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd