ಪಿಎಸ್ಎಲ್ವಿ-ಸಿ 52 ರಾಕೆಟ್ ಯಶಸ್ವಿ ಉಡಾವಣೆ Saaksha Tv
ಚೆನ್ನೈ(ತಮಿಳುನಾಡು): ಪಿಎಸ್ಎಲ್ವಿ-ಸಿ 52 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಈ ರಾಕೇಟ್ ಉಡಾವಣೆ ಮಾಡಿದ್ದು, ಇದರಲ್ಲಿ ಭೂ ವೀಕ್ಷಣಾ ಉಪಗ್ರಹ INSPIREsat-1 ಮತ್ತು INS-2TD ಸೇರಿದಂತೆ ಒಟ್ಟು ಮೂರು ಸಣ್ಣ ಉಪಗ್ರಹಗಳಿವೆ ಎಂದು ತಿಳಿದುಬಂದಿದೆ. ಸೋಮವಾರ ಬೆಳಗ್ಗೆ 5.59ನಿಮಿಷಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಮೊದಲ ಉಡಾವಣಾ ಪ್ಯಾಡ್ನಿಂದ ಉಡಾವಣೆಯಾಗಿದೆ.
ಈ ರಾಕೆಟ್ ಮೂಲಕ ಎರಡು ದೇಶದ ರಾಡಾರ್ ಇಮೇಜಿಂಗ್ ಉಪಗ್ರಹವಾದ RISAT-1A ಅನ್ನು ಉಡಾವಣೆ ಮಾಡಲಾಗಿದೆ. ಈಗ RISAT-1A ಉಪಗ್ರಹವನ್ನು ಭೂ ವೀಕ್ಷಣಾ ಉಪಗ್ರಹ-04 (Earth Observation Satellite-04) ಎಂದು ನಾಮಕರಣ ಮಾಡಲಾಗಿದೆ.
ಈ ಉಪಗ್ರಹವು ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್ನಂತಹ ಅಪ್ಲಿಕೇಷನ್ಗಳಿಗಾಗಿ ಕೆಲಸ ಮಾಡಲಿದೆ. ಎಂಥಹದ್ದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕೂಡಾ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ರವಾನಿಸುವಂತೆ ಈ ಉಪಗ್ರಹವನ್ನು ವಿನ್ಯಾಸ ಮಾಡಲಾಗಿದೆ.