ಮೈಸೂರು: ಕಾರೊಂದು ಇದ್ದಕ್ಕಿದ್ದಂತೆ ಟೋಲ್ ಬಳಿ ಹೊತ್ತಿ ಉರಿದ ಘಟನೆಯೊಂದು ನಡೆದಿದೆ.
ಮೈಸೂರು -ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಬಿಎಂಡಬ್ಲ್ಯು ಕಾರು ಹೊತ್ತಿ ಉರಿದಿದೆ. ಮೊದಲು ಬಿಎಂಡಬ್ಲ್ಯು ಕಾರಿನ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನೋಡ ನೋಡುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ. ಟೋಲ್ಗೇಟ್ ಹತ್ತಿರ ಕಾರು ನಿಲ್ಲಿಸಿದ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎನ್ನಲಾಗಿದೆ.
ಮೈಸೂರು ಮೂಲದ ಕುಟುಂಬವೊಂದು ನಂಜನಗೂಡಿನಿಂದ ಮರಳಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.