ಬೆಂಗಳೂರು: ನಾನು ಕಾಂಗ್ರೆಸ್ ನಲ್ಲಿ ಇದ್ದಾಗ 3 ಬಾರಿ ಗೆಲುವು ಸಾಧಿಸಿದ್ದೆ. ಆದರೆ, ಬಿಜೆಪಿಗೆ ಬಂದ ಮೇಲೆ ಎರಡು ಬಾರಿ ಸ್ಪರ್ಧಿಸಿ, ಎರಡು ಬಾರಿಯೂ ಸೋಲು ಕಂಡಿದ್ದೇನೆ. ಸುಧಾಕರ್ ತಾನೂ ಸೋತು ನನ್ನೂ ಸೋಲಿಸಿದ ಎಂದು ಮಾಜಿ ಸಚಿವ ಎಂಟಿಬಿ ನಾಗಾರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಕಾಂಗ್ರೆಸ್ ನಲ್ಲಿದ್ದಾಗಲೇ ಜನರು ನನ್ನನ್ನು ಗೆಲ್ಲಿಸುತ್ತಿದ್ದರು. ಆದರೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮಾತು ನಂಬಿ, ಅವರಿಗೆ ಗೌರವ ನೀಡಿ ಬಿಜೆಪಿ ಸೇರಿದ್ದೆ. ಆದರೆ, ಬಿಜೆಪಿ ಸೇರಿದ ನಂತರ 2 ಬಾರಿ ಸ್ಪರ್ಧಿಸಿ 2 ಬಾರಿಯೂ ಸೋತಿದ್ದೇನೆ. ಬೆಂಗಳೂರು ಗ್ರಾಮಾಂತರ ಉಸ್ತುವಾರಿಯನ್ನು ಡಾ.ಕೆ.ಸುಧಾಕರ್ ಗೆ ನೀಡಿದ್ದರು. ಆದರೆ, ಆತನೂ ಸೋತ, ನಮ್ಮನ್ನೂ ಸೋಲಿಸಿದ ಎಂದು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಪರಾಜಿತ ಬಿಜೆಪಿ ಅಭ್ಯರ್ಥಿಗಳ ಸಭೆಯಲ್ಲಿ ಎಂಟಿಬಿ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.








