Bangalore | ಯಶವಂತಪುರ ವಿಧಾನಸಭಾ ಕ್ಷೇತ್ರ ಕಸಾಪ ಅಧ್ಯಕ್ಷರಾಗಿ ಸುಧೀಂದ್ರಕುಮಾರ್
ಬೆಂಗಳೂರು : ಯಶವಂತಪುರ ವಿಧಾನಸದಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಹೆಚ್. ಎಸ್ .ಸುಧೀಂದ್ರ ಕುಮಾರ್ ಅವರನ್ನ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಅಧ್ಯಕ್ಷ ಎಂ ಪ್ರಕಾಶ್ ಮೂರ್ತಿ ನೇಮಕದ ಆದೇಶ ನೀಡಿದ್ದಾರೆ .
ಯಶವಂತಪುರ ವಿಧಾನಸಭಾ ಕ್ಷೇತ್ರ ರಚನೆಗೊಂಡಾಗ ಕನ್ನಡ ಸಾಹಿತ್ಯ ಪರಿಷತ್ ನ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸುಧೀಂದ್ರ ಕುಮಾರ್ ಅವರು ಈ ಬಾರಿಯೂ ಸಾಹಿತ್ಯಪರಿಷತ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ .
ಗೌರವ ಕಾರ್ಯದರ್ಶಿಗಳಾಗಿ ಎ.ಎನ್. ಶಿವಸ್ವಾಮಿ , ಗಂಗರೇವಯ್ಯ, ಕೋಶಾಧ್ಯಕ್ಷರಾಗಿ ವಿ. ವಿ. ಸತ್ಯನಾರಾಯಣ, ಮಹಿಳಾ ಸಾಹಿತಿಗಳಾಗಿ ಬಿ.ಎಸ್ .ಪಾರಿಜಾತ, ಆಶಾ ಹೆಗಡೆ,ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಪಿ. ಗಾಂಧಿ ,ಡಾ॥ ಜಿ ರಾಜು ಗುಂಡಾಪುರ,ಪರಿಶಿಷ್ಟ ಪಂಗಡ ಪ್ರತಿನಿಧಿಯಾಗಿ ಆರ್. ಚಂದ್ರಹಾಸ , ಸಂಘ ಸಂಸ್ಥೆ ಪ್ರತಿನಿಧಿ ಯಾಗಿ ತಮ್ಮಯ್ಯ ಯು.ಸಮಿತಿ ಸದಸ್ಯರಾಗಿ ಡಾ॥ ನಾಗರಾಜ್, ಜಗದೀಶ್ ಬಿ.ಸಿ .ಶಿವರಾಂ ಎಚ್. ತಿಮ್ಮೇಗೌಡ, ಎಚ್. ಎಂ. ಕೃಷ್ಣಮೂರ್ತಿ, ಪ್ರಕಾಶ್ ಎಚ್ .ಅವರನ್ನು ನೇಮಿಸಿ ಪ್ರಕಾಶ್ ಮೂರ್ತಿ ಆದೇಶ ಮಾಡಿದ್ದಾರೆ .
ಕನ್ನಡ ಸಾಹಿತ್ಯ ಪರಿಷತ್ ನಗರ ಜಿಲ್ಲಾ ಅಧ್ಯಕ್ಷ ಎಂ. ಪ್ರಕಾಶ್ ಮೂರ್ತಿ ಇಂದು ಆದೇಶದ ಪ್ರತಿಯನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ,ಖ್ಯಾತ ಗಾಯಕಿ ಬಿ ಕೆ ಸುಮಿತ್ರಾ ಉಪಸ್ಥಿತಿಯಲ್ಲಿ ನೀಡಿದರು.
Sudheendrakumar as Kasapa president of Yashwantpur Assembly constituency