Sudhir Verma : ಟಾಲಿವುಡ್ ನಲ್ಲಿ ಮತ್ತೊಂದು ದುರಂತ : ಯವ ನಾಯಕ ನಟ ಆತ್ಮಹತ್ಯೆ…
ಟಾಲಿವುಡ್ ನಲ್ಲಿ ಮತ್ತೊಂದು ದುರಂತ ಘಟನೆಯೊಂದು ನಡೆದಿದೆ. ಟಾಲಿವುಡ್ ಯುವ ನಾಯಕ ನಟ ಸುಧೀಕರ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಧೀರ್ ವರ್ಮ ಅವರ ನಿಧನ ವಿಷಯವನ್ನ ಅವರ ಸಹನಟ ಸುಧಾಕರ್ ಕೋಮುಕುಲ ಸೋಶಿಯಲ್ ಮೀಡಿಯಾದಲ್ಲಿ ಖಚಿತ ಪಡಿಸಿದ್ದಾರೆ. ಇವರು ಸುಧೀರ್ ವರ್ಮ ಅವರೊಂದಿಗೆ ‘ಕುಂದನಪು ಬೊಮ್ಮಚಿತ್ರದಲ್ಲಿ ನಟಿಸಿದ್ದರು.
‘ಕುಂದನಪು ಬೊಮ್ಮ’, ‘ಸೆಕೆಂಡ್ ಹ್ಯಾಂಡ್’, ‘ಶೂಟೌಟ್ ಅಟ್ ಅಲ್ಲೆರು’ ಮುಂತಾದ ತೆಲುಗು ಚಿತ್ರಗಳ ಮೂಲಕ ಸುಧೀರ್ ವರ್ಮಾ ಗುರುತಿಸಿಕೊಂಡಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಅವರು ವೈಜಾಗ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಧೀರ್ ವರ್ಮಾ ಆತ್ಮಹತ್ಯೆ ಮಾಡಿಕೊಂಡಿರುವ ಸತ್ಯವನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ನಟ ಸುಧಾಕರ್ ಕೋಮಕುಲ ತಮ್ಮ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ಸುಧೀರ್ ವರ್ಮಾ ಆತ್ಮಹತ್ಯೆ ವಿಚಾರ ತಿಳಿದ ಚಿತ್ರರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಸುಧೀರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
Sudhir Verma: Another tragedy in Tollywood: Young hero commits suicide…