ಬೆಂಗಳೂರು : ಇತ್ತೀಚೆಗಷ್ಟೇ ಚಿತ್ರದುರ್ಗ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಸುದ್ದಿಯಾಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ಮತ್ತೆ ನಾಲ್ಕು ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿಗೆ ಕಿಚ್ಚ ಪಣ ತೊಟ್ಟಿದ್ದಾರೆ.
ಕಿಚ್ಚ ಸುದೀಪ್ ಚಾರಿಟೆಬೆಲ್ ಸೊಸೈಟಿ ಮೂಲಕ ಶಿವಮೊಗ್ಗ ಜಿಲ್ಲೆಯ ಆವಿಗೆ ಹಳ್ಳಿ, ಹಾಳಸಸಿ, ಎಸ್.ಎನ್ ಬಡಾವಣೆ ಸಾಗರ, ಎಲ್.ಎಲ್ ಹಳ್ಳಿ ಸಾಗರ ಸೇರಿ ಒಟ್ಟು 4 ಕನ್ನಡ ಶಾಲೆಗಳನ್ನು ದತ್ತು ಪಡೆಯಲಾಗಿದೆ. ಸರ್ಕಾರಿ ಶಾಲಾ ಶಿಕ್ಷಕರ ಸಂಬಳ ಹಾಗೂ ಮಕ್ಕಳ ಸ್ಕಾಲರ್ ಶಿಪ್ ಬಿಟ್ಟು ಶಾಲೆ ಅಭಿವೃದ್ಧಿಯ ಜವಾಬ್ದಾರಿಯನ್ನು ಕಿಚ್ಚ ವಹಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣ ಕೆಲಸ. ಪೇಂಟಿಂಗ್, ಶೌಚಾಲಯ ನಿರ್ಮಾಣ ಸೇರಿ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಕಿಚ್ಚ ತಮ್ಮ ಟ್ರಸ್ಟ್ ಮೂಲಕ ಒದಗಿಸಲಿದ್ದಾರೆ.
🚩🚩🚩
stay tuned to our
instagram handle for an exclusive video at 4 pm
Link : https://t.co/1eN5XfA6LV@KicchaSudeep#ಮೊದಲು_ಮಾನವನಾಗು#KichchaSudeepaCharitableSociety— Ramesh Kitty (@Kitty_R7) August 9, 2020








