ಸಾಲದ ಶೂಲಕ್ಕೆ ರೈತ ಬಲಿ gadag Saaksha tv
ಗದಗ : ಸಾಲದ ಬಾಧೆ ತಾಳಲಾರದೇ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ನಡೆದಿದೆ. ಮಾನಪ್ಪ ಲಮಾಣಿ ಮೃತ ದುರ್ದೈವಿಯಾಗಿದ್ದಾರೆ.
ಮಾನಪ್ಪ ಲಮಾಣಿ ತಮ್ಮ ಎರಡೂವರೆ ಎಕೆರೆ ಜಮೀನಿನಲ್ಲಿ ಸಾಲಶೂಲ ಮಾಡಿ ಮೆಕ್ಕೆಜೋಳ ಬೆಳೆದಿದ್ದರು. ಆದರೇ ಅಕಾಲಿಕ ಮಳೆಯಿಂದಾಗಿ ನಿರೀಕ್ಷೆಗಿಂತ ಕಡಿಮೆ ಫಸಲು ಬಂದಿದೆ. ಇದರಿಂದ ನೊಂದ ಮಾನಪ್ಪ ವಿಷ ಸೇವಿಸಿದ್ದಾರೆ.
ಇದನ್ನು ತಿಳಿದ ಕುಟುಂಬಸ್ಥರು ಕೂಡಲೇ ಮಾನಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದ್ರೆ ಲಕ್ಷ್ಮೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಾನಪ್ಪ ಲಮಾಣಿ ಕೊನೆಯುಸಿರೆಳೆದಿದ್ದಾರೆ.