ಸನ್ನಿ @ 50… ಲಿಟ್ಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಗೆ ಸಲಾಂ,,!
ಮಾರ್ಚ್ 6, 1971.
ಸರಿಯಾಗಿ 50 ವರ್ಷಗಳ ಹಿಂದೆ.. ಕ್ರಿಕೆಟ್ ಜಗತ್ತಿಗೆ ಭಾರತೀಯ ಅನಘ್ರ್ಯ ರತ್ನವನ್ನು ಪರಿಚಯಿಸಿದ್ದ ದಿನ.
ಪೋರ್ಟ್ ಆಫ್ ಸ್ಪೇನ್ ನಲ್ಲಿ ವೆಸ್ಸ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದಾಗ ಆ ಕ್ರಿಕೆಟಿಗನ ವಯಸ್ಸು 21.
ದೈತ್ಯ ಕೆರೆಬಿಯನ್ ತಂಡದ ವಾಯು ವೇಗದ ದಾಳಿಗೆ ಹೆಲ್ಮೇಟ್ ಧರಿಸದೇ ದಿಟ್ಟ ಉತ್ತರವನ್ನು ನೀಡಿದ್ದ ಆ ಕ್ರಿಕೆಟಿಗ ಮುಂದೊಂದು ದಿನ ಇಡೀ ಕ್ರಿಕೆಟ್ ಜಗತ್ತನ್ನೇ ತನ್ನತ್ತ ಸೆಳೆದುಕೊಳ್ಳುವಲ್ಲಿ ಸಫಲರಾಗಿದ್ದು ಈಗ ಇತಿಹಾಸ.
ಚೊಚ್ಚಲ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳಲ್ಲಿ ಮೂರು ಶತಕ, ಒಂದು ದ್ವಿ ಶತಕ ಹಾಗೂ ಒಂದು ಅರ್ಧಶತಕ ಸೇರಿ ಒಟ್ಟು ಗಳಿಸಿದ್ದ ರನ್ ಗಳ ಸಂಖ್ಯೆ 774. ಅಲ್ಲಿಂದ ಶುರುವಾದ ಕ್ರಿಕೆಟ್ ರನ್ ಧಾರಣೆ ಕೊನೆಗೊಂಡಿದ್ದು 9187ರ ಮಾರ್ಚ್ 13ರಂದು. ಅದು ಪಾಕಿಸ್ತಾನದ ವಿರುದ್ಧ ಕಟ್ಟ ಕಡೆಯ ಟೆಸ್ಟ್ ಪಂದ್ಯವನ್ನು ಆಡಿ ತನ್ನ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದಾಗ ಆ ಕ್ರಿಕೆಟಿಗನ ಹೆಸರಿನಲ್ಲಿ ದಾಖಲಾದ ಪ್ರಮುಖ ದಾಖಲೆಗಳು ಹೀಗಿವೆ..
ಗರಿಷ್ಠ ಟೆಸ್ಟ್ ಪಂದ್ಯ (125), ಅತೀ ಹೆಚ್ಚು ಸತತ ಟೆಸ್ಟ್ ಪಂದ್ಯ (106), ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ (10,122) ಗರಿಷ್ಠ ಶತಕಗಳ ಸಂಖ್ಯೆ (34), ಗರಿಷ್ಠ ಅರ್ಧಶತಕ (79), ಗರಿಷ್ಠ ಶತಕಗಳ ಜೊತೆಯಾ (58)
ಇದೀಗ ಈ ಎಲ್ಲಾ ದಾಖಲೆಗಳು ಅಳಿಸಿಹೊಗಿರಬಹುದು. ಆದ್ರೆ ಹೆಜ್ಜೆ ಗುರುತಿನ ನೆನಪು ಮಾತ್ರ ಎಂದಿಗೂ ಎಂದೆಂದಿಗೂ ಇದ್ದೇ ಇರುತ್ತೆ.
ಅಂದ ಹಾಗೇ ಕ್ರಿಕೆಟ್ ಜಗತ್ತಿನಲ್ಲಿ ರನ್ ಮೆಷಿನ್, ಲಿಟ್ಲ್ ಮಾಸ್ಟರ್, ಸನ್ನಿ ಹೀಗೆ ಹೆಸರುಗಳಿಂದ ಕರೆಯುತ್ತಿದ್ದ ಕ್ರಿಕೆಟಿಗ ವಿಶ್ವ ಕ್ರಿಕೆಟ್ಗೆ ಎಂಟ್ರಿಯಾಗಿ ಇಂದಿಗೆ 50 ವರ್ಷ. ಈ ಕ್ರಿಕೆಟಿಗನ ಹೆಸರು ಸುನೀಲ್ ಗವಾಸ್ಕರ್.
ಹೌದು, ಸುನೀಲ್ ಗವಾಸ್ಕರ್ ಅಂದ್ರೆ 70-80 ರ ದಶಕದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿದ್ದ ಹೆಸರು. ಎಂಥ ವೇಗದ ಎಸೆತಗಳು ಇರಲಿ, ಬುಗರಿಯಂತೆ ತಿರುಗುವ ಸ್ಪಿನ್ ಎಸೆತಗಳೇ ಇರಲಿ, ಸುನೀಲ್ ಗವಾಸ್ಕರ್ ಬ್ಯಾಟ್ ನ ಸ್ಪರ್ಶಕ್ಕೆ ಯಾವುದು ಕೂಡ ಲೆಕ್ಕಕ್ಕೇ ಬರುತ್ತಿರಲಿಲ್ಲ. ಅಂತಹ ಅಭೂತಪೂರ್ವ ಬ್ಯಾಟಿಂಗ್ ಕೌಶಲ್ಯ ಸುನೀಲ್ ಗವಾಸ್ಕರ್ ನಲ್ಲಿತ್ತು.
ಇದೀಗ ಸುನೀಲ್ ಗವಾಸ್ಕರ್ ಆಟದ ವೈಖರಿ, ಸಾಧನೆ, ಯಶಸ್ಸು ಇತಿಹಾಸ ಪುಟದಲ್ಲಿ ದಾಖಲಾಗಿ ಹೋಗಿವೆ. ಅದ್ರ ಫ್ಲಾಷ್ ಬ್ಯಾಕ್ ಮಾತ್ರ ಯಾವತ್ತಿಗೂ ಮಾಸಲ್ಲ. ಇಂತಹ ಶ್ರೇಷ್ಠ ಆಟಗಾರನ ಸಾಧನೆ, ಯಶಸ್ಸಿಗೊಂದು ಸಲಾಂ.
ಟೆಸ್ಟ್ ಕ್ರಿಕೆಟ್ಗೆ ಎಂಟ್ರಿಯಾಗಿ 50 ವರ್ಷ ಪೂರೈಸಿದ್ದ ಈ ಸಂದರ್ಭದಲ್ಲಿ ಬಿಸಿಸಿಐ ಗೌರವ ನೀಡಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ ಸುನೀಲ್ ಗವಾಸ್ಕರ್ ಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯ್ತು,
ಒಟ್ಟಿನಲ್ಲಿ 71ರ ಹರೆಯದ ಸುನೀಲ್ ಗವಾಸ್ಕರ್ ಅವರು ಭಾರತೀಯ ಕ್ರಿಕೆಟ್ನ ಅನಘ್ರ್ಯ ರತ್ನ