Sunil gavaskar prediction : ಮಯಾಂಕ್ ಮ್ಯಾಜಿಕ್ ಮಾಡಲ್ಲ
ಐಪಿಎಲ್ ಕದನಕ್ಕೆ ಒಂದು ದಿನ ಮಾತ್ರ ಬಾಕಿ ಇದೆ. ಮಾರ್ಚ್ 6 ರಂದು ಐಪಿಎಲ್ ಗೆ ಅಧಿಕೃತ ಚಾಲನೆ ಸಿಗಲಿದೆ.
ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಇನ್ನೊಂದು ಕಡೆ ತಂಡಗಳ ಬಲಾಬಲಗಳ ಬಗ್ಗೆ ಮಾಜಿ ಕ್ರಿಕೆಟರ್ ಗಳು ಚರ್ಚೆ ಮಾಡುತ್ತಿದ್ದಾರೆ.
ಅದರಂತೆ ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಪಂಜಾಬ್ ಕಿಂಗ್ಸ್ ತಂಡದ ಬಗ್ಗೆ ಮಾತನಾಡಿದ್ದು, ಈ ಬಾರಿಯೂ ಪಂಜಾಬ್ ಮ್ಯಾಜಿಕ್ ಮಾಡಲ್ಲ ಎಂದಿದ್ದಾರೆ.
ಅನುಭವಿ ಆಟಗಾರರ ಕೊರತೆಯಿಂದ ಪಂಜಾಬ್ ತಂಡ ಈ ಬಾರಿ ಸ್ಪರ್ಧೆಯಲ್ಲಿ ನಿಲ್ಲುವುದು ಕಷ್ಟ.
‘‘ಇದುವರೆಗೆ ಐಪಿಎಲ್ ಪ್ರಶಸ್ತಿ ಗೆಲ್ಲದ ತಂಡಗಳಲ್ಲಿ ಪಂಜಾಬ್ ಕಿಂಗ್ಸ್ ಕೂಡ ಒಂದು.
ಈ ಬಾರಿಯೂ ಪಂಜಾಬ್ ಪ್ರಶಸ್ತಿ ಗೆಲ್ಲುವುದು ಕಷ್ಟ. ಏಕೆಂದರೆ ಪಂಜಾಬ್ ತಂಡದಲ್ಲಿ ಅಂತಹ ಪ್ರಭಾವ ಬೀರುವ ಆಟಗಾರ ಇಲ್ಲ. ಪಂಜಾಬ್ ಯುವ ಆಟಗಾರರಿಂದ ತುಂಬಿದೆ.
ತಂಡದ ಮೇಲೆ ಹೆಚ್ಚಿನ ನಿರೀಕ್ಷೆಗಳು ಇಲ್ಲದಿದ್ದಾಗ ಆಟಗಾರರು ಒತ್ತಡವಿಲ್ಲದೇ ಆಡುತ್ತಾರೆ. ಆಟಗಾರರು ಸಂಪೂರ್ಣ ಸ್ವಾತಂತ್ರ್ಯದಿಂದ ಆಡುತ್ತಾರೆ.
ಆದರೆ ಟ್ರೋಫಿ ಗೆಲ್ಲುವುದು ಅವರಿಗೆ ತುಂಬಾ ಕಷ್ಟ. ಟಿ20 ಮಾದರಿಯಲ್ಲಿ ಗೆಲ್ಲಲು ಅತ್ಯುತ್ತಮ ತಂಡವನ್ನು ಹೊಂದಿರಬೇಕು ಎಂದು ಗವಾಸ್ಕರ್ ಸಂದರ್ಶನದಲ್ಲಿ ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ತನ್ನ ಮೊದಲ ಪಂದ್ಯದಲ್ಲಿ ಮಾರ್ಚ್ 27 ರಂದು RCB ವಿರುದ್ಧ ಸೆಣಸಲಿದೆ. sunil-gavaskar-prediction- punjab kings ipl 2022