INDvsWI : ರೋಹಿತ್ ಕ್ಯಾಪ್ಟನ್ಸಿಗೆ ಸನ್ನಿಗೆ ಕೊಟ್ಟ ರೇಟಿಂಗ್ ಎಷ್ಟು..?
ಅಹಮದಾಬಾದ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಜಯ ಸಾಧಿಸಿದೆ.
ಪೂರ್ಣ ಪ್ರಮಾಣದ ವೈಟ್ ಬಾಲ್ ನಾಯಕನಾಗಿ, ರೋಹಿತ್ ಶರ್ಮಾ ತನ್ನ ಮೊದಲ ಪಂದ್ಯದಲ್ಲಿ ಭಾರತಕ್ಕೆ ಅದ್ಭುತ ಜಯ ತಂದುಕೊಟ್ಟಿದ್ದಾರೆ.
ಈ ವಿಚಾರದಲ್ಲಿ ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
ಈ ಪಂದ್ಯದಲ್ಲಿ ಗವಾಸ್ಕರ್ ಅವರು ರೋಹಿತ್ ನಾಯಕತ್ವಕ್ಕೆ 10ಕ್ಕೆ 9.99 ರೇಟಿಂಗ್ ಕೊಟ್ಟಿದ್ದಾರೆ.

“ನಾಯಕನಾಗಿ ಇದು ರೋಹಿತ್ ಗೆ ಅದ್ಭುತ ಆರಂಭವಾಗಿದೆ. ರೋಹಿತ್ ಟಾಸ್ ಗೆದ್ದು ಸರಿಯಾದ ನಿರ್ಧಾರವನ್ನು ತೆಗೆದುಕೊಂಡರು ಎಂದಿದ್ದಾರೆ.
ಈ ಗೆಲುವನ್ನು ರೋಹಿತ್ ಗೆ ಸದಾ ನೆನಪಿನಲ್ಲಿರುತ್ತದೆ. ಅದೇ ರೀತಿ ರೋಹಿತ್ ನಾಯಕನಾಗಿ ಮಾತ್ರವಲ್ಲದೆ ಬ್ಯಾಟ್ಸ್ ಮನ್ ಆಗಿಯೂ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರೋಹಿತ್ ಉತ್ತಮ ಫೀಲ್ಡ್ ಪ್ಲೇಸ್‌ಮೆಂಟ್ ಕೂಡ ಮಾಡಿದ್ದರು. ಅದೇ ರೀತಿ ನಿರ್ಣಾಯಕ ಸಮಯದಲ್ಲಿ ಬೌಲಿಂಗ್ ನಲ್ಲಿ ಬದಲಾವಣೆ ಮಾಡುವ ಮೂಲಕ ನಾಯಕನಾಗಿ ತಾನೇಂದು ಸಾಬೀತುಪಡಿಸಿದ್ದಾರೆ.
ಈ ಪಂದ್ಯದಲ್ಲಿ ರೋಹಿತ್ ಕ್ಯಾಪ್ಟನ್ಸಿಗೆ10ಕ್ಕೆ 9.99 ರೇಟಿಂಗ್ ಕೊಡುತ್ತೇವೆ ಎಂದಿದ್ದಾರೆ ಸನ್ನಿ.