Gavaskar : ಆತ ಅದ್ಭುತ ಫಾರ್ಮ್ ನಲ್ಲಿದ್ದಾರೆ.. ಟೀ ಇಂಡಿಯಾಗೆ ವಾಪಸ್ ಆಗ್ತಾನೆ
ಭಾರತ ಟೆಸ್ಟ್ ತಂಡದಿಂದ ಕೋಕ್ ಪಡೆದಿರುವ ಹಿರಿಯ ಆಟಗಾರ ಚೇತೇಶ್ವರ ಪೂಜಾರ ಇಂಗ್ಲೆಂಡ್ ಕೌಂಟಿಯಲ್ಲಿ ಅಬ್ಬರಿಸುತ್ತಿದ್ದಾರೆ.
ಸಸೆಕ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಪೂಜಾರ ಈ ಋತುವಿನಲ್ಲಿ ಇದುವರೆಗೆ 717 ರನ್ ಗಳಿಸಿದ್ದಾರೆ.
ಪೂಜಾರ ಇನ್ನಿಂಗ್ಸ್ನಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದಾರೆ. ಅಲ್ಲದೇ ಕೌಂಟಿಯಲ್ಲಿ ಸತತವಾಗಿ ಮಿಂಚುತ್ತಿರುವ ಪೂಜಾರ ಭಾರತ ಟೆಸ್ಟ್ ತಂಡಕ್ಕೆ ಮರಳಲಿದ್ದಾರೆ ಎಂದು ಟೀಂ ಇಂಡಿಯಾದ ದಿಗ್ಗಜ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
‘ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯವನ್ನಾಡಲಿದೆ.
ಕಳೆದ ವರ್ಷದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ ಮುನ್ನ ನ್ಯೂಜಿಲೆಂಡ್ ಇಂಗ್ಲೆಂಡ್ನಲ್ಲಿ ಎರಡು ಟೆಸ್ಟ್ಗಳ ಸರಣಿಯನ್ನು ಆಡಿತ್ತು.
ಹಾಗಾಗಿ ಅಲ್ಲಿನ ಪರಿಸ್ಥಿತಿಗಳಿಗೆ ಒಗ್ಗಿಕೊಂಡರು. ಅಲ್ಲದೆ ಸೌತಾಂಪ್ಟನ್ ನಲ್ಲಿ ನಡೆದ WTC ಫೈನಲ್ನಲ್ಲಿ ನ್ಯೂಜಿಲೆಂಡ್ ಜಯಗಳಿಸಿತು.
ಈಗ ಪೂಜಾರ ಅದನ್ನೇ ಮಾಡುತ್ತಿದ್ದಾರೆ. ಆದರೆ ಕೌಂಟಿ ಪೇಸ್ ದಾಳಿಗೆ, ಟೆಸ್ಟ್ ಬೌಲಿಂಗ್ ತುಂಬಾ ವಿಭಿನ್ನವಾಗಿದೆ.
ಆದ್ರೆ ಬ್ಯಾಟರ್ ಲಯದಲ್ಲಿದ್ದಾಗ ಯಾವುದು ದೊಡ್ಡ ಸಮಸ್ಯೆಯಾಗಿರುವುದಿಲ್ಲ. ಅವರು ಭಾರತ ಟೆಸ್ಟ್ ತಂಡಕ್ಕೆ ಮರಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. sunil gavaskar-reaction-pujara-comeback