ADVERTISEMENT
Monday, September 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಇಂಜಮಮ್ ಉಲ್ ಹಕ್‍ಗೆ ಸುನೀಲ್ ಗವಾಸ್ಕರ್ ನೀಡಿದ್ದ ಸಲಹೆ ಏನು ?

admin by admin
July 13, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಇಂಜಮಮ್ ಉಲ್ ಹಕ್‍ಗೆ ಸುನೀಲ್ ಗವಾಸ್ಕರ್ ನೀಡಿದ್ದ ಸಲಹೆ ಏನು ?

ಇಂಜಮಮ್ ಉಲ್ ಹಕ್.. ಪಾಕಿಸ್ತಾನ ಕ್ರಿಕೆಟ್‍ನ ಮಾಜಿ ನಾಯಕ. ವಿಶ್ವ ಕ್ರಿಕೆಟ್‍ನ ಶ್ರೇಷ್ಠ ಬ್ಯಾಟ್ಸ್ ಮೆನ್‍ಗಳಲ್ಲಿ ಒಬ್ಬರಾಗಿದ್ದಾರೆ. ಅದ್ಭುತ ಆಟದ ಮೂಲಕವೇ ಗಮನ ಸೆಳೆದಿದ್ದ ಇಂಜಿ ತನ್ನ ಕ್ರಿಕೆಟ್ ಬದುಕಿನಲ್ಲಿ ಕೆಲಸವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮುಖ್ಯವಾಗಿ ಶಾರ್ಟ್ ಪಿಚ್ ಎಸೆತಗಳು. ಶಾರ್ಟ್ ಪಿಚ್ ಎಸೆತಗಳು ಇಂಜಿಯವರ ಬ್ಯಾಟಿಂಗ್‍ಗೆ ತುಂಬಾನೇ ತೊಂದರೆ ಕೊಡುತ್ತಿದ್ದವು. ಹೀಗೆ ಸಮಸ್ಯೆ ಎದುರಿಸುತ್ತಿದ್ದ ಇಂಜಮಮ್ ಉಲ್ ಹಕ್ ಕೊನೆಗೆ ಮೊರೆ ಹೋಗಿದ್ದು ಭಾರತ ಕ್ರಿಕೆಟ್ ನ ದಂತ ಕಥೆ ಸುನೀಲ್ ಗವಾಸ್ಕರ್
ಭಾರತ ಕ್ರಿಕೆಟ್ ತಂಡದ ಆರಂಭಿಕ ಹಾಗೂ ವಿಶ್ವದ ಶ್ರೇಷ್ಠ ಆಟಗಾರ ಸುನೀಲ್ ಗವಾಸ್ಕರ್ ನೀಡಿರುವ ಆ ಒಂದು ಸಲಹೆಯಿಂದ ಮುಂದೆ ಇಂಜಿ ಕ್ರಿಕೆಟ್ ಬದುಕು ಮುಗಿಯುವ ತನಕ ಶಾರ್ಟ್ ಪಿಚ್ ಎಸೆತಗಳಿಗೆ ಹೆದರಲಿಲ್ಲ. ಆ ಸಮಸ್ಯೆಯೇ ಅವರಿಗೆ ಆಗಲಿಲ್ಲ. ಹಾಗಿದ್ರೆ ಸುನೀಲ್ ಗವಾಸ್ಕರ್ ನೀಡಿರುವ ಸಲಹೆ ಏನು ಎಂಬುದನ್ನು ಸ್ವತಃ ಇಂಜಮಮ್ ಉಲ್ ಹಕ್ ಹೇಳಿದ್ದಾರೆ.
1992ರ ವಿಶ್ವಕಪ್ ನಲ್ಲಿ ನಾನು ಅದ್ಭುತ ಪ್ರದರ್ಶನ ನೀಡಿದ್ದೆ. ವಿಶ್ವಕಪ್ ಟೂರ್ನಿಯ ಯಶಸ್ಸಿನ ನಂತರ ಪಾಕ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆದ್ರೆ ಇಂಗ್ಲೆಂಡ್ ಪಿಚ್ ನಲ್ಲಿ ಹೇಗೆ ಆಡಬೇಕು ಎಂಬ ಕಲ್ಪನೆಯೂ ನನಗೆ ಇರಲಿಲ್ಲ. ಮುಖ್ಯವಾಗಿ ನಾನು ಶಾರ್ಟ್ ಪಿಚ್ ಎಸೆತಗಳಿಗೆ ದಂಗಾಗುತ್ತಿದೆ. ಹೀಗಾಗಿ ಏನು ಮಾಡಬೇಕು ಅಂತನೇ ಗೊತ್ತಾಗುತ್ತಿರಲಿಲ್ಲ. ಇದೇ ವೇಳೆ ಸುನೀಲ್ ಗವಾಸ್ಕರ್ ಅವರು ಇಂಗ್ಲೆಂಡ್ ನಲ್ಲಿ ಚಾರಿಟಿ ಪಂದ್ಯವೊಂದನ್ನು ಆಡಲು ಬಂದಿದ್ದರು. ಆ ಪಂದ್ಯದಲ್ಲಿ ನಾನು ಸಹ ಆಡಿದ್ದೆ. ಆಗ ಸುನೀಲ್ ಭಾಯ್, ನಾನು ಶಾರ್ಟ್‍ಪಿಚ್ ಎಸೆತಗಳು ನನಗೆ ತೊಂದರೆಯನ್ನುಂಟು ಮಾಡುತ್ತಿವೆ. ಇದಕ್ಕೆ ಏನು ಪರಿಹಾರ ಅಂತ ಕೇಳಿದ್ದೆ. ಆಗ ಸುನೀಲ್ ಗವಾಸ್ಕರ್ ಒಂದು ಸಣ್ಣ ಸಲಹೆ ನೀಡಿದ್ದರು. ಇದು ನನ್ನ ಮುಂದಿನ ಕ್ರಿಕೆಟ್ ಬದುಕಿನುದ್ದಕ್ಕೂ ವರ್ಕ್‍ಔಟ್ ಆಯ್ತು. ಮುಂದೆ ಎಂದಿಗೂ ನನಗೆ ಶಾರ್ಟ್ ಪಿಚ್ ಎಸೆತಗಳು ಸಮಸ್ಯೆಯೇ ಆಗಿರಲಿಲ್ಲ ಅಂತ ಹೇಳ್ತಾರೆ ಇಂಜಮಮ್ ಉಲ್ ಹಕ್.
ಅಷ್ಟಕ್ಕೂ ಸುನೀಲ್ ಗವಾಸ್ಕರ್ ಹೇಳಿದ್ದು ಇಷ್ಟೇ… ನೀನು ಎಂದಿಗೂ ಅದು ಶಾರ್ಟ್ ಬಾಲ್ ಎಸೆತ ಅಥವಾ ಬೌನ್ಸರ್ ಎಸೆತ ಅಂತ ತಿಳಿಯಬೇಡ. ನೀನು ಆ ಕ್ಷಣದ ಬಗ್ಗೆ ಯೋಚಿಸು ಅಷ್ಟೇ. ಬೌಲರ್‍ನ ಎಸೆತವನ್ನು ಕ್ಷಣ ಮಾತ್ರದಲ್ಲೇ ಅರ್ಥಮಾಡಿಕೊಳ್ಳಬೇಕು. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು ಅನ್ನೋ ಸಲಹೆಯನ್ನು ಸುನೀಲ್ ಗವಾಸ್ಕರ್ ನೀಡಿದ್ದರು ಎಂದು ಇಂಜಮಮ್ ಉಲ್ ಹಕ್ ಹೇಳಿದ್ದಾರೆ.
ಗವಾಸ್ಕರ್ ಸಲಹೆಯಂತೆ ನೆಟ್ಸ್‍ನಲ್ಲೂ ಅದೇ ರೀತಿ ಯೋಚನೆ ಮಾಡಿಕೊಂಡು ನಾನು ಅಭ್ಯಾಸ ನಡೆಸಿದ್ದೆ. ಮಾನಸಿಕವಾಗಿಯೂ ಗಟ್ಟಿಯಾದೆ. ನನ್ನ ಬಳಿ ನಾನೇ ಮಾತನಾಡಿಕೊಂಡೆ. ಅವು ಶಾರ್ಟ್ ಬಾಲ್ ಎಸೆತಗಳಲ್ಲ ಅಂತ. ಈ ನನ್ನ ವೀಕ್‍ನೆಸ್ ಅನ್ನು ಗವಾಸ್ಕರ್ ಸಲಹೆಯಂತೆ ನಾನೇ ದೂರ ಮಾಡಿಕೊಂಡೆ. ಮುಂದೆ ಎಂದಿಗೂ ನನಗೆ ಶಾರ್ಟ್ ಬಾಲ್ ಎಸೆತಗಳು ಸಮಸ್ಯೆಯಾಗಲಿಲ್ಲ ಎಂದು ಇಂಜಿ ತಿಳಿಸಿದ್ರು.
ಇಂಜಮಮ್ ಉಲ್ ಹಕ್ ಅವರು 120 ಟೆಸ್ಟ್ ಪಂದ್ಯಗಳಲ್ಲಿ 8830 ರನ್ ಹಾಗೂ 378 ಏಕದಿನ ಪಂದ್ಯಗಳಲ್ಲಿ 11739 ರನ್ ಪೇರಿಸಿದ್ದಾರೆ. ಅಂದ ಹಾಗೇ ಇಂಜಮಮ್ ಉಲ್ ಹಕ್ ಅವರು ಸುನೀಲ್ ಗವಾಸ್ಕರ್ ಅವರ 71ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ರು.

Related posts

ಕುಮಾರಸ್ವಾಮಿ ಅವರ 10 ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ನೀಡಿದ ಒಂದೇ ಒಂದು ಸವಾಲು ಏನು: KPSC ಅಕ್ರಮದ ಅಸಲಿ ಮುಖವಾಡ ಕಳಚಿದ ಖರ್ಗೆ!

ಕುಮಾರಸ್ವಾಮಿ ಅವರ 10 ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ನೀಡಿದ ಒಂದೇ ಒಂದು ಸವಾಲು ಏನು: KPSC ಅಕ್ರಮದ ಅಸಲಿ ಮುಖವಾಡ ಕಳಚಿದ ಖರ್ಗೆ!

September 6, 2026
ಮೈಸೂರು ದಸರಾ ಗಜಪಡೆಗೆ ಬಿಗಿ ಭದ್ರತೆ: ಆನೆಗಳ ಮೇಲೆ 24 ಗಂಟೆ ನಿಗಾ

ಮೈಸೂರು ದಸರಾ ಗಜಪಡೆಗೆ ಬಿಗಿ ಭದ್ರತೆ: ಆನೆಗಳ ಮೇಲೆ 24 ಗಂಟೆ ನಿಗಾ

September 6, 2026
Tags: bcciCricketEnglandICCindiaInzamam-ul-HaqPakistanPCBsunil gavaskar
ShareTweetSendShare
Join us on:

Related Posts

ಕುಮಾರಸ್ವಾಮಿ ಅವರ 10 ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ನೀಡಿದ ಒಂದೇ ಒಂದು ಸವಾಲು ಏನು: KPSC ಅಕ್ರಮದ ಅಸಲಿ ಮುಖವಾಡ ಕಳಚಿದ ಖರ್ಗೆ!

ಕುಮಾರಸ್ವಾಮಿ ಅವರ 10 ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ನೀಡಿದ ಒಂದೇ ಒಂದು ಸವಾಲು ಏನು: KPSC ಅಕ್ರಮದ ಅಸಲಿ ಮುಖವಾಡ ಕಳಚಿದ ಖರ್ಗೆ!

by Shwetha
September 6, 2026
0

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಎಂಜಿನಿಯರ್ ಹುದ್ದೆಗಳ...

ಮೈಸೂರು ದಸರಾ ಗಜಪಡೆಗೆ ಬಿಗಿ ಭದ್ರತೆ: ಆನೆಗಳ ಮೇಲೆ 24 ಗಂಟೆ ನಿಗಾ

ಮೈಸೂರು ದಸರಾ ಗಜಪಡೆಗೆ ಬಿಗಿ ಭದ್ರತೆ: ಆನೆಗಳ ಮೇಲೆ 24 ಗಂಟೆ ನಿಗಾ

by Shwetha
September 6, 2026
0

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಐತಿಹಾಸಿಕ ಜಂಬೂ ಸವಾರಿಯಲ್ಲಿ ಭಾಗವಹಿಸಲಿರುವ ದಸರಾ ಗಜಪಡೆಯ ಸುರಕ್ಷತೆಗೆ ಅರಣ್ಯ ಇಲಾಖೆ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅರಮನೆ...

ಸೈಫ್–ಕರೀನಾ ಪ್ರೇಮಕಥೆಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಅಕ್ಷಯ್ ಕುಮಾರ್

ಸೈಫ್–ಕರೀನಾ ಪ್ರೇಮಕಥೆಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಅಕ್ಷಯ್ ಕುಮಾರ್

by Shwetha
September 6, 2026
0

ಬಾಲಿವುಡ್‌ನ ಜನಪ್ರಿಯ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಪ್ರೇಮಕಥೆ ಹೇಗೆ ಆರಂಭವಾಯಿತು ಎಂಬುದರ ಬಗ್ಗೆ ನಟ ಅಕ್ಷಯ್ ಕುಮಾರ್ ಕುತೂಹಲಕಾರಿ ಸಂಗತಿಯೊಂದನ್ನು...

ಟಿವಿಕೆ ಮೈತ್ರಿಕೂಟದಿಂದ ಕಾಂಗ್ರೆಸ್‌ ಹಿಂದೆ ಸರಿಯುವ ಎಚ್ಚರಿಕೆ

ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿ ಎಂದು ಒಪ್ಪದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ-ಸೆಪ್ಟೆಂಬರ್ 9ರ ಸಭೆಯಲ್ಲಿ ಮೈತ್ರಿಕೂಟದ ಭವಿಷ್ಯ ನಿರ್ಧಾರ: ವಿಜಯ್ ಸರ್ಕಾರದ ಬುಡ ಅಲ್ಲಾಡಿಸುತ್ತಿದೆಯೇ ಪ್ರಧಾನಿ ಪಟ್ಟದ ಆಸೆ!

by Shwetha
September 6, 2026
0

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಕಾಂಗ್ರೆಸ್ ನಡುವೆ 2029ರ ಲೋಕಸಭಾ ಚುನಾವಣೆಯ...

ರಾಜ್ಯಕ್ಕೆ ಮುಂಗಾರು ಮಳೆ ಕೈಕೊಡಲಿದೆ,ಅನ್ನ ನೀರಿಗಾಗಿ ಹಾಹಾಕಾರ ತಪ್ಪಿದ್ದಲ್ಲ,ಬಂಡೆ ಒಡೆಯುವ ಮಾನವನ ದುರಾಸೆಯೇ ಅನಾಹುತಕ್ಕೆ ಮೂಲ:ಕೋಡಿಮಠ ಶ್ರೀಗಳಿಂದ ಮತ್ತೊಂದು ಸ್ಫೋಟಕ ಭವಿಷ್ಯ

ರಾಜ್ಯಕ್ಕೆ ಮುಂಗಾರು ಮಳೆ ಕೈಕೊಡಲಿದೆ,ಅನ್ನ ನೀರಿಗಾಗಿ ಹಾಹಾಕಾರ ತಪ್ಪಿದ್ದಲ್ಲ,ಬಂಡೆ ಒಡೆಯುವ ಮಾನವನ ದುರಾಸೆಯೇ ಅನಾಹುತಕ್ಕೆ ಮೂಲ:ಕೋಡಿಮಠ ಶ್ರೀಗಳಿಂದ ಮತ್ತೊಂದು ಸ್ಫೋಟಕ ಭವಿಷ್ಯ

by Shwetha
September 6, 2026
0

ಬೆಂಗಳೂರು: ತಮ್ಮ ನಿಖರ ಭವಿಷ್ಯವಾಣಿಗಳಿಂದಲೇ ನಾಡಿನಾದ್ಯಂತ ಸಂಚಲನ ಮೂಡಿಸುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಇದೀಗ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಮುಂದಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram