Sunil Gavaskar | ಸೂರ್ಯ ಕುಮಾರ್ ಕ್ರಿಕೆಟ್ ನ ನಯಾ ಸ್ಟಾರ್
ಸೂರ್ಯ ಕುಮಾರ್ ಯಾದವ್ ಇಲ್ಲದಿದ್ರೇ ವಿಶ್ವಕಪ್ ನಲ್ಲಿ ಭಾರತ ತಂಡ 150 ರನ್ ಗಳನ್ನು ದಾಟುವುದಿಲ್ಲ ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದ ಕುರಿತು ದಿಗ್ಗಜ ಕ್ರಿಕೆಟರ್ ಸುನಿಲ್ ಗವಾಸ್ಕರ್ ಸಂಚಲನ ಹೇಳಿಕೆ ನೀಡಿದ್ದಾರೆ. ಅಲ್ಲದೇ ಸೂರ್ಯ ಕುಮಾರ್ ಬಗ್ಗೆ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸೂರ್ಯ ಕುಮಾರ್ ಒಬ್ಬ ನಯಾ ಸ್ಟಾರ್. ಮೈದಾನ ಮೂಲೆ ಮೂಲೆಗೂ ಅವರು ಚೆಂಡನ್ನು ಹೊಡೆಯುತ್ತಾರೆ.
ಮಿಸ್ಟರ್ 360 ಡಿಗ್ರಿ ಪ್ಲೇಯರ್ ಅಂತಾ ಕರೆಸಿಕೊಳ್ಳಲು ಆತ ನೂರಕ್ಕೆ ನೂರಷ್ಟು ಸೂಕ್ತವಾದ ವ್ಯಕ್ತಿ.

ಕ್ರೀಸ್ ಗೆ ಕಚ್ಚಿನಿಂತರೇ ಆತನನ್ನು ತಡೆಯೋದು ತುಂಬಾ ಕಷ್ಟ. ಟೆಕ್ನಿಕ್ ಜೊತೆಗೆ ಭುಜಬಲ ಆತನ ಪ್ರಧಾನ ಅಸ್ತ್ರವಾಗಿದೆ.
ಕ್ರಿಕೆಟ್ ಚರಿತ್ರೆಯಲ್ಲಿ ಕೆಲವು ಶಾಟ್ ಗಳಿದ್ದು, ಅವುಗಳನ್ನು ಸೂರ್ಯ ಒಬ್ಬನೇ ಆಡಬಲ್ಲ.
ಇದು ಕೇವಲ ನನ್ನ ಅಭಿಪ್ರಾಯ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಆತನ ಇನ್ನಿಂಗ್ಸ್ ಗಳನ್ನು ನೋಡಿದ್ರೆ ಯಾರಾದ್ರೂ ಇದನ್ನೇ ಹೇಳುತ್ತಾರೆ ಎಂದಿದ್ದಾರೆ.