ಸಮುದ್ರ ಗರ್ಭದಲ್ಲಿ ಸರ್ಣ ನಿಧಿ.. ಲಕ್ಷ ಕೋಟಿ ಮೌಲ್ಯ..
300 ವರ್ಷಗಳಿಂದ ಸಮುದ್ರದಲ್ಲಿ ಅಡಗಿದ್ದ ಸ್ಯಾನ್ ಜೋಸ್ ಯುದ್ಧನೌಕೆಯ ನಿಧಿ ಕೊನೆಗೂ ಪತ್ತೆಯಾಗಿದೆ.
ಕೊಲಂಬಿಯಾ ನೌಕಾಪಡೆಯು ಕಾರ್ಟೇಜಿನಾ ಕರಾವಳಿಯ ಬಳಿ ನಿಧಿಯನ್ನು ಪತ್ತೆ ಮಾಡಿದೆ.
ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಕೊಲಂಬಿಯಾ ನೌಕಾಪಡೆ ಬಿಡುಗಡೆ ಮಾಡಿದೆ.

ಕೊಲಂಬಿಯಾದ ಸ್ವಾತಂತ್ರ್ಯದ ಯುದ್ಧದ ಮೊದಲು ಬ್ರಿಟನ್ ಮತ್ತು ಸ್ಪೇನ್ ನಡುವಿನ 1708 ರ ಯುದ್ಧದಲ್ಲಿ ಸ್ಯಾನ್ ಜೋಸ್ ಮುಳುಗಿತು.
ಸಮುದ್ರತಳದಲ್ಲಿ 3,100 ಅಡಿ ಆಳದಲ್ಲಿರುವ ಧ್ವಂಸಗೊಂಡ ಹಡಗಿನ ಸಮೀಪಕ್ಕೆ ರಿಮೋಟ್ ನಿಯಂತ್ರಿತ ಯಂತ್ರವನ್ನು ಕಳುಹಿಸಿ ಫೋಟೋಗಳನ್ನು ಸಂಗ್ರಹಿಸಲಾಗಿದೆ.
ಅಲ್ಲಲ್ಲಿ ಚಿನ್ನದ ನಾಣ್ಯಗಳು, ವಜ್ರಗಳು, ಅಮೂಲ್ಯ ಖನಿಜಗಳು, ಪಿಂಗಾಣಿ ಲೋಟಗಳು ಮತ್ತು ಮಣ್ಣಿನ ಪಾತ್ರೆಗಳು ಇವೆ.
ಈ ಸಂಪತ್ತಿನ ಮೌಲ್ಯ ಒಂದು ಲಕ್ಷ ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
ಇದರ ಮೇಲೆ ಕೊಲಂಬಿಯಾಗೆ ಹಕ್ಕುಗಳಿವೆ ಎನ್ನುತ್ತಿದ್ದರೇ ಸ್ಪೇನ್, ಅಮೇರಿಕನ್ ಕಂಪನಿ ಮತ್ತು ಬೊಲಿವಿಯನ್ ಮೂಲನಿವಾಸಿಗಳು ಪೈಪೋಟಿ ಬೀಳುತ್ತಿವೆ.