ಎತ್ತಿನ ಬಂಡಿಗಳ ಅಪಘಾತ ತಡೆಯಲು ಕಲಬುರಗಿ ಸಂಚಾರ ಪೊಲೀಸರಿಂದ ಸೂಪರ್ ಪ್ಲಾನ್ Saaksha Tv
ಕಲಬುರಗಿ: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗುವ ಎತ್ತಿನ ಬಂಡಿಗಳ ಅಪಘಾತ ತಡೆಯಲು ಕಲಬುರಗಿ ಸಂಚಾರ ಪೊಲೀಸರು ರೇಡಿಯಂ ರಿಪ್ಲೆಕ್ಟರ್ ಅಂಟಿಸುವ ಮೂಲಕ ಸೂಪರ್ ಪ್ಲಾನ್ ಮಾಡಿದ್ದಾರೆ.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಬೃಹತ್ ವಾಹನಗಳ ಜೊತೆ ರೈತರ ಎತ್ತಿನ ಬಂಡಿಗಳು ಸಹ ಸಂಚರಿಸುತ್ತವೆ. ಆದರೆ ಎತ್ತಿನ ಬಂಡಿಗಳಿಗೆ ಯಾವುದೇ ಲೈಟ್ ಸೇರಿದಂತೆ ವಿದ್ಯುತ್ ಉಪಕರಣಗಳು ಇಲ್ಲದಿರುವ ಹಿನ್ನೆಲೆ ಅಪಘಾತಕ್ಕೆ ಒಳಗಾಗುತ್ತಿದ್ದವು. ಈ ಹಿನ್ನೆಲೆ ಪೊಲೀಸರು ಅಪಘಾತ ತಡೆಯಲು ರೇಡಿಯಂ ರಿಪ್ಲೆಕ್ಟರ್ ಅಂಟಿಸುತ್ತಿದ್ದಾರೆ.
ಪ್ರತಿ ತಿಂಗಳು ಜಾನುವಾರು ಮತ್ತು ಬಂಡಿಗಳಿಗೆ ವಾಹನಗಳು ಗುದ್ದಿರುವ ಐದಾರು ಪ್ರಕರಣಗಳು ವರದಿ ಆಗುತ್ತಿದ್ದವು. ರೈತರ ಆತಂಕ ದೂರ ಮಾಡುವ ಹಿನ್ನೆಲೆಯಲ್ಲಿ ರೇಡಿಯಂ ರಿಫ್ಲೆಕ್ಟರ್ ಅಂಟಿಸಲಾಗುತ್ತಿದೆ ಎಂದು ಸಂಚಾರಿ ಎಸಿಪಿ ಸುಧಾ ಆದಿ ಹೇಳಿದ್ದಾರೆ.
ರಾತ್ರಿ ಹೊಲಗಳಿಂದ ಹಿಂದಿರುಗುವಾಗ ಹೆದ್ದಾರಿ ಮಾರ್ಗವಾಗಿ ನಾವು ಊರು ಸೇರಿಕೊಳ್ಳಬೇಕು. ಅಪಘಾತಗಳ ಸುದ್ದಿ ಕೇಳಿ ಜೀವ ಕೈಯಲ್ಲಿ ಹಿಡಿದು ಬರುತ್ತಿದ್ದೇವೆ. ಪೊಲೀಸರ ಈ ನಡೆಯಿಂದ ನಮ್ಮ ಆತಂಕ ದೂರವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.