ADVERTISEMENT
Tuesday, September 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೇಜ್ರಿವಾಲ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳಾರತಿ

admin by admin
June 13, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಕೇಜ್ರಿವಾಲ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳಾರತಿ
ನವದೆಹಲಿ: ಕೊರೊನಾ ರೋಗಿಗಳು ಹಾಗೂ ಮೃತಪಟ್ಟವರ ವಿಚಾರದಲ್ಲಿ ದೆಹಲಿ ಸರ್ಕಾರ ನಡೆದುಕೊಳ್ಳುವ ರೀತಿ ಭಯಾನಕವಾಗಿದೆ. ರೋಗಿಗಳನ್ನು ಆಸ್ಪತ್ರೆಗಳಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ನೋಡುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.


ಕೊರೊನಾ ರೋಗಿಗಳ ಚಿಕಿತ್ಸೆಗೆ ನಿರ್ಲಕ್ಷ್ಯ ತೋರಿಸುತ್ತಿರುವ ಬಗ್ಗೆ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‍ನ ನ್ಯಾ.ಅಶೋಕ್ ಭೂಷಣ್ ನೇತೃತ್ವದ ಪೀಠ, `ಕೊರೊನಾದಿಂದ ಮೃತಪಟ್ಟವರ ಶವಗಳ ಬಗ್ಗೆ ಆಸ್ಪತ್ರೆಗಳ ಸಿಬ್ಬಂದಿ ನಡೆದುಕೊಳ್ಳುವ ಸ್ಥಿತಿ ಬೇಸರ ಹುಟ್ಟಿಸುವಂತಿದೆ. ನಿಮ್ಮ ಆಡಳಿತ ವೈಖರಿ ಬಗ್ಗೆ ಹೇಳಲು ಪದಗಳು ಬರುತ್ತಿಲ್ಲ…ದಯವಿಟ್ಟು ಕ್ಷಮಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ನಿರ್ಲಕ್ಷ್ಯ ಹಾಗೂ ಶವಗಳ ಸಮರ್ಪಕ ವಿಲೇವಾರಿ ಮಾಡದ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಮೃತ ದೇಹಗಳ ಬಗ್ಗೆ ನಿರ್ಲಕ್ಷ್ಯ ಹಾಗೂ ಅಗೌರವ ತೋರಿಸುವುದು ಅಪರಾಧವಾಗಿದೆ ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಸಾಲಿಸಿಟರಲ್ ಜನರಲ್ ತುಷರ್ ಮೆಹ್ತಾ ಕೋರ್ಟ್‍ಗೆ ದಾಖಲೆ ಸಮೇತ ವಿವರಣೆ ನೀಡಿದರು.
ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಶವವೊಂದನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ. ತಮ್ಮವರನ್ನು ಕಳೆದುಕೊಂಡವರು ಕಣ್ಣೀರಿಡುತ್ತಿದ್ದರೂ ಯಾರೊಬ್ಬರು ಅವರನ್ನು ಸಂಪರ್ಕಿಸುತ್ತಿಲ್ಲ. ಕೊರೊನಾದಿಂದ ರೋಗಿ ಮೃತಪಟ್ಟಿದ್ದರೂ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡುತ್ತಿಲ್ಲ. ಮೃತ ದೇಹಗಳಿಗೆ ಅಂತಿಮ ಗೌರವ ಸಲ್ಲಿಸಲೂ ಬಿಡುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಆಸ್ಪತ್ರೆಗಳ ಸಿಬ್ಬಂದಿ ವಿರುದ್ಧ ಕಟುವಾದ ಶಬ್ದಗಳಲ್ಲಿ ಆಕ್ರೋಶ ಹೊರಹಾಕಿದೆ.

Related posts

shivarajkumar-starrer-koormavatara-movie-teaser-launched-in-hyderabad-dil-raju-sai-kumar-news-in-kannada-

ಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಅಭಿನಯದ ‘ಕೂರ್ಮಾವತಾರ’ ಚಿತ್ರದ ಭರ್ಜರಿ ಟೀಸರ್ ಬಿಡುಗಡೆ

September 1, 2026
darshan-puttanayya-meets-dk-shivakumar-in-delhi-karnataka-2-0-digital-governance

ದೆಹಲಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಹತ್ವದ ಸಭೆ

September 1, 2026


ರಾಜಧಾನಿ ದೆಹಲಿಯಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರಿದ್ದು, ಪರಿಸ್ಥಿತಿ ಭಯಾನಕವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 2500 ಬೆಡ್‍ಗಳು ಖಾಲಿ ಇದ್ದರೂ ಯಾರೋಬ್ಬರು ಅತ್ತ ತಲೆ ಹಾಕುತ್ತಿಲ್ಲ ಎಂದು ಸುಪ್ರೀಂಕೋರ್ಟ್ ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ..

Tags: aaparavinda kejriwalcoronavirusDelhiSupreme Court
ShareTweetSendShare
Join us on:

Related Posts

shivarajkumar-starrer-koormavatara-movie-teaser-launched-in-hyderabad-dil-raju-sai-kumar-news-in-kannada-

ಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಅಭಿನಯದ ‘ಕೂರ್ಮಾವತಾರ’ ಚಿತ್ರದ ಭರ್ಜರಿ ಟೀಸರ್ ಬಿಡುಗಡೆ

by admin
September 1, 2026
0

ಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಅಭಿನಯದ ‘ಕೂರ್ಮಾವತಾರ’ ಚಿತ್ರದ ಭರ್ಜರಿ ಟೀಸರ್ ಬಿಡುಗಡೆ 'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಬಹುಭಾಷಾ ಚಿತ್ರ ‘ಕೂರ್ಮಾವತಾರ’ದ ಟೀಸರ್...

darshan-puttanayya-meets-dk-shivakumar-in-delhi-karnataka-2-0-digital-governance

ದೆಹಲಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಹತ್ವದ ಸಭೆ

by admin
September 1, 2026
0

ದೆಹಲಿ/ಬೆಂಗಳೂರು: ಜನಸಾಮಾನ್ಯರ ಕುಂದುಕೊರತೆಗಳಿಗೆ ತಕ್ಷಣವೇ ಸ್ಪಂದಿಸಲು ಹಾಗೂ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿರಿಸುವಂತೆ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಹತ್ವದ ಹೆಜ್ಜೆ...

organic-sante-in-pandavapura-every-monday-mla-darshan-puttanayya-3456789

ಪಾಂಡವಪುರದಲ್ಲಿ ಸಾವಯವ ಸಂತೆ ಕ್ರಾಂತಿ – ಪ್ರತಿ ಸೋಮವಾರ ನಡೆಯಲಿದೆ ವಿಷಮುಕ್ತ ಸಂತೆಯ ಸಂಭ್ರಮ!

by admin
September 1, 2026
0

  ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರವನ್ನು ‘ಸಂಪೂರ್ಣ ಸಾವಯವ ತಾಲೂಕು’ ಮಾಡುವ ನಿಟ್ಟಿನಲ್ಲಿ ಮತ್ತೊಂದು ದೃಢ ಹಾಗೂ ಮಹತ್ವದ ಹೆಜ್ಜೆ ಇಡಲಾಗಿದೆ. ಪುಟ್ಟಣ್ಣಯ್ಯ ಫೌಂಡೇಶನ್ ವತಿಯಿಂದ ಪಾಂಡವಪುರ...

holidays-india/lakshadweep-tour-packages.html

ನೀಲಿ ಸಮುದ್ರದ ಸುಂದರ ಲಕ್ಷದ್ವೀಪಕ್ಕೆ ಬೆಂಗಳೂರಿನಿಂದ ನೇರ ವಿಮಾನ: ಇಲ್ಲಿದೆ ಕಂಪ್ಲೀಟ್ ಟೂರ್ ಡೀಟೇಲ್ಸ್!

by admin
September 1, 2026
0

ಬೆಂಗಳೂರು: ನೀಲಿ ಸಮುದ್ರ, ಹವಳದ ದಿಬ್ಬಗಳು ಮತ್ತು ನಿಸರ್ಗ ಸೌಂದರ್ಯಕ್ಕೆ ಹೆಸರಾದ ಲಕ್ಷದ್ವೀಪಕ್ಕೆ ಪ್ರವಾಸ ಹೋಗಲು ಬಯಸುವವರಿಗೆ ಇಲ್ಲೊಂದು ಸಿಹಿ ಸುದ್ದಿ. ಪ್ರಮುಖ ಆನ್‌ಲೈನ್ ಟ್ರಾವೆಲ್ ಸಂಸ್ಥೆ...

upes-university-google-cloud-partnership-gemini-day-celebration-ai-education

ಎಐ ಶಿಕ್ಷಣಕ್ಕೆ ಒತ್ತು ನೀಡಲು ಗೂಗಲ್ ಕ್ಲೌಡ್ ಜೊತೆ ಒಪ್ಪಂದ, ಯುಪಿಇಎಸ್‌ ಕ್ಯಾಂಪಸ್‌ನಲ್ಲಿ ಅದ್ದೂರಿ ‘ಜೆಮಿನಿ ಡೇ’ ಆಚರಣೆ

by admin
September 1, 2026
0

  ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಹೆಸರಾಂತ ಯುಪಿಇಎಸ್ ವಿಶ್ವವಿದ್ಯಾಲಯವು ಗೂಗಲ್ ಕ್ಲೌಡ್ ಜೊತೆಗಿನ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಿದೆ. ಇದರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram