ದೇಶದ್ರೋಹ ಕಾನೂನು ಪ್ರಶ್ನಿಸಿ ಸಲ್ಲಿಸಿರುವ ಹೊಸ ಅರ್ಜಿ ಪರಿಶೀಲನೆಗೆ ಸುಪ್ರೀಂ ಅಸ್ತು
ನವದೆಹಲಿ : ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ನ್ಯಾಯಪೀಠ ಬುಧವಾರ ಸಮ್ಮತಿಸಿದೆ. ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ನಿವೃತ್ತ ಮೇಜರ್ ಜನರಲ್ ಎಸ್ಜಿ ವೊಂಬತ್ತ್ಕೆರೆ ಸಲ್ಲಿಸಿದ್ದರು.. ಐಪಿಸಿ ಸೆಕ್ಷನ್ 124-ಎಯಡಿ ಬರುವ ದೇಶದ್ರೋಹ ಕಾನೂನು, ಅಸಾಂವಿಧಾನಿಕವಾಗಿದ್ದು ಮೂಲಭೂತ ಹಕ್ಕುಗಳಾದ ವಾಕ್ಸ್ವಾತಂತ್ರ್ಯ ಮತ್ತು ಅಭಿವ್ಯಕ್ತ ಸ್ವಾತಂತ್ರ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆದ್ದರಿಂದ ಇದನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಮ್ಯಾನ್ಮಾರ್ : ಆಂಗ್ ಸೂ ಕಿ ವಿರುದ್ಧ ಮತ್ತೆ 4 ಹೆಚ್ಚುವರಿ ಪ್ರಕರಣ ದಾಖಲು
ಈ ಅರ್ಜಿಯನ್ನು ವಿಚಾರಣೆಗೆ ಪರಿಶೀಲಿಸಲು ಸಮ್ಮತಿಸಿದ ನ್ಯಾಯಪೀಠ, ಅರ್ಜಿಯ ಪ್ರತಿಯನ್ನು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಗೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ. ಇದಕ್ಕೂ ಮುನ್ನ, ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಪತ್ರಕರ್ತರಾದ ಕಿಶೋರ್ಚಂದ್ರ ವಾಂಗ್ಖೆಮ್ಚ ಮತ್ತು ಕನ್ಹಯ ಲಾಲ್ ಶುಕ್ಲ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಸುಪ್ರೀಂಕೋರ್ಟ್ ನ ಪ್ರತ್ಯೇಕ ಪೀಠ, ಈ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದೆ.