ರಾಜಕೀಯಕ್ಕೆ ಸೂರಜ್ ರೇವಣ್ಣ : ಬಿಜೆಪಿ ವ್ಯಂಗ್ಯ

1 min read

ರಾಜಕೀಯಕ್ಕೆ ಸೂರಜ್ ರೇವಣ್ಣ : ಬಿಜೆಪಿ ವ್ಯಂಗ್ಯ

ಬೆಂಗಳೂರು : ಕುಟುಂಬ ರಾಜಕಾರಣದಲ್ಲೂ ಮಾನದಂಡವನ್ನು ಹುಡುಕಲು ಹೊರಟರೆ ಅಲ್ಲಿಯೂ ಎಚ್‍ಡಿ ದೇವೇಗೌಡರದು ಒಂದು ಆದರ್ಶ ಕುಟುಂಬ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸೂರಜ್ ರೇವಣ್ಣ ಅವರಿಗೆ ಹಾಸನದ ಜೆಡಿಎಸ್ ಟಿಕೆಟ್ ನೀಡುವ ಬಗ್ಗೆ ಟ್ವಿಟ್ಟರ್ ನಲ್ಲಿ ಬಿಜೆಪಿ ವ್ಯಂಗ್ಯವಾಡಿದೆ.

ಬಿಜೆಪಿ ತನ್ನ ಟ್ವೀಟ್ ನಲ್ಲಿ…
ಕುಟುಂಬ ರಾಜಕಾರಣದಲ್ಲೂ ಮಾನದಂಡವನ್ನು ಹುಡುಕಲು ಹೊರಟರೆ ಅಲ್ಲಿಯೂ ಎಚ್‍ಡಿ ದೇವೇಗೌಡರದು ಒಂದು ಆದರ್ಶ ಕುಟುಂಬ.

ಒಂದೇ ಕುಟುಂಬದ ಎಂಟು ಜನರು ರಾಜಕಾರಣದಲ್ಲಿ ಸ್ಥಾನಮಾನ ಪಡೆದ ಕರ್ನಾಟಕದ ಏಕೈಕ ಪಕ್ಷ ಎಂಬ ಹೆಗ್ಗಳಿಕೆ ಪಡೆಯಲು ಕಾರಣವಾದ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.

Suraj Ravanna Saaksha tv

ಜೆಡಿಎಸ್ ಪಕ್ಷದಲ್ಲಿ ದೊಡ್ಡಗೌಡರ ಕುಟುಂಬದ ಎಲ್ಲಾ ಕವಲುಗಳೂ ರಾಜಕೀಯ ಸ್ಥಾನಮಾನ ಪಡೆಯುತ್ತಿದೆ.

ರೇವಣ್ಷ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ.

ಕುಟುಂಬದ ಕಾರ್ಯಕರ್ತರ ಉಳಿವಿಗಾಗಿ ಜೆಡಿಎಸ್ ನಡೆಸುತ್ತಿರುವ ತ್ಯಾಗ ಶ್ಲಾಘನೀಯ

ಪಕ್ಷಕ್ಕೋಸ್ಕರ ನೀವು ದುಡಿಮೆ ಮಾಡಿ. ಅಧಿಕಾರವೂ ನಿಮ್ಮದೇ ಆಗಿರುತ್ತದೆ ಎಂದು ಈ ಹಿಂದೆ ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ಭರವಸೆ ನೀಡಿದ್ದರು.

ಬಹುಷಃ, ಜೆಡಿಎಸ್ ಕಾರ್ಯಕರ್ತರು ಶ್ರಮಪಡದ ಕಾರಣ ಪಕ್ಷಕ್ಕಾಗಿ ದುಡಿದ ಸೂರಜ್ ರೇವಣ್ಣ ಅವರಿಗೆ ಈಗ ಟಿಕೆಟ್ ನೀಡಲಾಗಿದೆ ಎಂದು ಕುಟುಕಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd