ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ : ಸುರೇಶ್ ಕುಮಾರ್ ಹೇಳಿದ್ದೇನು..?
ಬೆಂಗಳೂರು : ಇಂದು ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿತ್ತಿದ್ದು, ಈ ಬಗ್ಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿವಾಹಿನಿ ಜೊತೆ ಮಾತನಾಡಿದ ಅವರು, ನಾವು ಅಂದುಕೊಂಡ ಹಾಗೇ ಇವತ್ತು ಫಲಿತಾಂಶ ಪ್ರಕಟ ಆಗ್ತಿದೆ. ನನಗೆ ಪರೀಕ್ಷೆ ಮಾಡಬೇಕು ಅಂತ ಯಾವುದೇ ಹಠ, ಪ್ರತಿಷ್ಠೆ ಇರಲಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ಮಾಡಲಾಗಿತ್ತು. ವಿಶೇಷ ರೀತಿ ಈ ವರ್ಷ ಪರೀಕ್ಷೆ ಮಾಡಿದೆವು. ಪರೀಕ್ಷೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು.
ಇನ್ನು ಪರೀಕ್ಷೆ ಸಮಯದಲ್ಲಿ ನನ್ನ ಮೇಲೆ ಅನೇಕ ವಿರೋಧಗಳು ಕೇಳಿ ಬಂದಿದ್ದವು. ಆದರೂ ಯಶಸ್ವಿಯಾಗಿ ಪರೀಕ್ಷೆ ಮಾಡಿದ್ದೇವೆ. ನನಗೆ ಪರೀಕ್ಷೆ ನಡೆಸಿದ ಸಮಾಧಾನ ಇದೆ. ನಾನು ಶಿಕ್ಷಣ ಸಚಿವನಾಗಿ ಎರಡು ಗುಣ, ಪಾಠ ಕಲಿತಿದ್ದೇನೆ. ತಾಳ್ಮೆ ಮತ್ತು ಸಮಚಿತ್ತ ಭಾವನೆಯಿಂದ ನೋಡೋದು ಕಲಿತಿದ್ದೇನೆ. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನ ಉಜ್ವಲ ಆಗಿರಲಿ. ವಿದ್ಯಾರ್ಥಿಗಳ ಕನಸುಗಳು ನನಸಾಗಲಿ ಎಂದು ಸುರೇಶ್ ಕುಮಾರ್ ಶುಭ ಹಾರೈಸಿದರು.









