ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಟೀಮ್ ಇಂಡಿಯಾದ ಮುಂದಿನ ಧೋನಿ ಯಾರು ಅನ್ನೋ ಪ್ರಶ್ನೆಗೆ ರೈನಾ ಉತ್ತರ ರೋಹಿತ್ ಶರ್ಮಾ..!

admin by admin
July 29, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಟೀಮ್ ಇಂಡಿಯಾದ ಮುಂದಿನ ಧೋನಿ ಯಾರು ಅನ್ನೋ ಪ್ರಶ್ನೆಗೆ ರೈನಾ ಉತ್ತರ ರೋಹಿತ್ ಶರ್ಮಾ..!

ಟೀಮ್ ಇಂಡಿಯಾದ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿಯ ಕೊಡುಗೆ ಅದ್ಭುತ. ಎರಡು ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದ ವೈಖರಿಯೇ ಅಮೋಘವಾಗಿತ್ತು. ಸದಾ ಕೂಲ್ ಆಗಿಯೇ ತಂಡವನ್ನು ಮುನ್ನಡೆಸುತ್ತಿದ್ದ ಧೋನಿಗೆ ಕೂಲ್ ಕ್ಯಾಪ್ಟನ್ ಎಂಬ ಬಿರುದೂ ಇದೆ. ಇದೆಲ್ಲಾ ಈಗ ಇತಿಹಾಸ ಸೇರಿಕೊಂಡಾಗಿದೆ. ಆದ್ರೆ ಸುರೇಶ್ ರೈನಾ ಮತ್ತೆ ಧೋನಿಯನ್ನು ನೆನಪು ಮಾಡಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಸಿಎಸ್‍ಕೆ ಪರ ಆಡುತ್ತಿರುವ ರೈನಾ ಧೋನಿಯ ಆಪ್ತ ಗೆಳೆಯನೂ ಹೌದು.
ಇದೀಗ ಸುರೇಶ್ ರೈನಾ ರೋಹಿತ್ ಶರ್ಮಾನ ಬಗ್ಗೆ ಮಾತನಾಡಿದ್ದಾರೆ. ರೋಹಿತ್ ಶರ್ಮಾನನ್ನು ಧೋನಿಯ ಜೊತೆಗೂ ಹೋಲಿಕೆ ಮಾಡಿದ್ದಾರೆ. ರೋಹಿತ್ ಶರ್ಮ ಟೀಮ್ ಇಂಡಿಯಾದ ಮತ್ತೊಬ್ಬ ಮಹೇಂದ್ರ ಸಿಂಗ್ ಧೋನಿ ಅಂತ ಬಣ್ಣಿಸಿದ್ದಾರೆ.
ರೋಹಿತ್ ಶರ್ಮಾನಲ್ಲಿ ಅದ್ಭುತವಾದ ನಾಯಕನ ಗುಣಗಳಿವೆ. ನಾನು ರೋಹಿತ್‍ನನ್ನು ಹತ್ತಿರದಿಂದ ನೋಡಿದ್ದೇನೆ. ಯಾವಾಗಲೂ ಕೂಲ್ ಆಗಿಯೇ ಇರುತ್ತಾನೆ. ಸಹ ಆಟಗಾರರ ಮಾತನ್ನು ಕೇಳುವ ತಾಳ್ಮೆ ಆತನಲ್ಲಿದೆ. ಹಾಗೇ ಆಟಗಾರರಿಗೆ ಮನೋಸ್ಥೈರ್ಯ ತುಂಬುತ್ತಾನೆ. ತಂಡವನ್ನು ಮುಂದೆ ನಿಂತು ಮುನ್ನಡೆಸುತ್ತಾನೆ. ಡ್ರೆಸಿಂಗ್ ರೂಮ್ ನ ವಾತಾವರಣವನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಹಾಗಾಗಿ ನನ್ನ ಪ್ರಕಾರ ರೋಹಿತ್ ಶರ್ಮಾ ಭವಿಷ್ಯದ ಟೀಮ್ ಇಂಡಿಯಾದ ಧೋನಿ ಅಂತ ಸುರೇಶ್ ರೈನಾ ಹೇಳಿದ್ದಾರೆ.
ರೋಹಿತ್ ಶರ್ಮಾ ಪ್ರತಿಯೊಬ್ಬನನ್ನು ನಾಯಕನಾಗಿಯೇ ನೋಡುತ್ತಾನೆ. ನಾನು ಆತನನ್ನು ನೋಡಿದ್ದೇನೆ. ಆತನ ಜೊತೆ ಆಡಿದ್ದೇನೆ. ಆತನ ನಾಯಕತ್ವದಲ್ಲೂ ಆಡಿದ್ದೇನೆ. ಬಾಂಗ್ಲಾದೇಶದಲ್ಲಿ ಏಷ್ಯಾಕಪ್ ಗೆದ್ದಾಗ ಆತ ತಂಡದ ಆಟಗಾರರಿಗೆ ಯಾವ ರೀತಿ ಆತ್ಮವಿಶ್ವಾಸ ತುಂಬಿದ್ದ ಎಂಬುದು ಸಹ ನನಗೆ ನೆನಪಿದೆ. ಯುವ ಆಟಗಾರರಿಗೆ ಸದಾ ಪ್ರೋತ್ಸಾಹ ತುಂಬಿರುತ್ತಾನೆ ಎಂದು ರೈನಾ ರೋಹಿತ್ ಶರ್ಮಾ ಅವರ ನಾಯಕತ್ವದ ಗುಣಗಳನ್ನು ಕೊಂಡಾಡಿದ್ದಾರೆ.
ರೋಹಿತ್ ಶರ್ಮಾ ಧೋನಿಯ ನಂತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಐಪಿಎಲ್ ನಲ್ಲಿ ನಾಯಕನಾಗಿ ಧೋನಿಗಿಂತ ಹೆಚ್ಚು ಟ್ರೋಫಿಗಳನ್ನು ಗೆದ್ದಿದ್ದಾರೆ. ರೋಹಿತ್ ಮತ್ತು ಧೋನಿ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಯಾವಾಗ ನಾಯಕನಾದವನು ಕೇಳಿಕೊಳ್ಳುತ್ತಾನೋ ಆಗ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆಟಗಾರರ ಮಾನಸಿಕ ತೊಂದರೆಗಳು ಸಹ ನಿವಾರಣೆಯಾಗುತ್ತದೆ. ನನ್ನ ಪ್ರಕಾರ ಇಬ್ಬರು ಕೂಡ ಅದ್ಭುತ ನಾಯಕರು ಎಂದು ರೈನಾ ಬಣ್ಣಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಅತ್ಯಂತ ಯಶಸ್ವಿ ನಾಯಕ. 8 ವರ್ಷಗಳಲ್ಲಿ ರೋಹಿತ್ ನಾಯಕತ್ವದಲ್ಲಿ ನಾಲ್ಕು ಬಾರಿ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಹಾಗೇ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದಾಗ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದ್ದರು. 2018ರ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಒಟ್ಟಾರೆ, ರೋಹಿತ್ ಶರ್ಮಾ 10 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, 8ರಲ್ಲಿ ಜಯ ಸಾಧಿಸಿದೆ. ಹಾಗೇ 20 ಟಿ-ಟ್ವೆಂಟಿ ಪಂದ್ಯಗಳಲ್ಲಿ 16 ಪಂದ್ಯಗಳಲ್ಲಿ ರೋಹಿತ್ ಸಾರಥ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿದೆ.

Related posts

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

August 2, 2026
jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

August 2, 2026
Tags: asia cup 2018cskDHONIIPLMahendra Singh Dhonimubai indiansrainaRohithrohith sharmaSuresh Rainateam indiavirat kohli
ShareTweetSendShare
Join us on:

Related Posts

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

by admin
August 2, 2026
0

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ತಮ್ಮ ಗೆಳತಿ ಮಹೀಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯ ತಿರುಮಲ ವೆಂಕಟೇಶ್ವರನಿಗೆ...

jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

by admin
August 2, 2026
0

ಸುಮಾರು ಒಂದುವರೆ ತಿಂಗಳ ಹಿಂದೆ. ಆಕೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಳು. ಗ್ಲೌಸ್ ಧರಿಸಿ ಅಭ್ಯಾಸ ನಡೆಸಬೇಕಿದ್ದ ಕೈಗಳಿಗೆ ಚಿಕಿತ್ಸೆಯ ಸೂಜಿಗಳು ಚುಚ್ಚಿಕೊಂಡಿದ್ದವು. ಹಲವು ದಿನಗಳ ಕಾಲ...

ecchara-5-rashigalige-shani-kata-mooru-dina-astrology-kannada

Astro-ಎಚ್ಚರ.. ಎಚ್ಚರ.. ನಾಳೆಯಿಂದ ಮೂರು ದಿನ ಈ 5 ರಾಶಿಯವರಿಗೆ ಶನಿಕಾಟ..!

by admin
August 2, 2026
0

ನಾಳೆಯಿಂದ ಮೂರು ದಿನ ಕೆಲ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ಈ ದಿನ ಶನಿ ಹಾಗೂ ಚಂದ್ರನ ಸಂಯೋಗದಿಂದಾಗಿ ಅತ್ಯಂತ ಅಶುಭ ಯೋಗ ಸೃಷ್ಟಿಯಾಗಲಿದೆ. ಇದು ಕೆಲ...

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

by Shwetha
August 2, 2026
0

ನವದೆಹಲಿ: ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಭಾರಿ ಹೋರಾಟಕ್ಕೆ ಕರೆ ನೀಡಿದೆ. ಆಗಸ್ಟ್ 4 ರಂದು ದೆಹಲಿಯ ಮಾಜಿ...

ಮಳೆಯ ಅಬ್ಬರದಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಳ

ಮಳೆಯ ಅಬ್ಬರದಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಳ

by Shwetha
August 2, 2026
0

ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆಆರ್‌ಎಸ್‌,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram