CSK ಮುಂದಿನ ನಾಯಕ ಯಾರು.. ರೈನಾ ಹೇಳಿದ್ದೇನು..?
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಯಶಸ್ವಿ ತಂಡವಾಗಿದೆ.
ನಾಲ್ಕು ಬಾರಿ ಪ್ರಶಸ್ತಿ ಗೆದ್ದಿರುವ ಸಿಎಸ್‌ಕೆ ಯಶಸ್ಸಿನ ಪಯಣದಲ್ಲಿ ನಾಯಕ ಎಂಎಸ್ ಧೋನಿ ಪಾತ್ರ ಅವಿಸ್ಮರಣೀಯ.
ಈ ನಡುವೆ ಧೋನಿ ಈ ಸೀಸನ್ ನಲ್ಲಿ ಐಪಿಎಲ್ ಗೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಚೆನ್ನೈ ತಂಡದ ಮುಂದಿನ ನಾಯಕ ಯಾರು ಎಂಬ ಚರ್ಚೆ ಶುರುವಾಗಿದೆ.
ಇದೀಗ ಈ ಪ್ರಶ್ನೆ ಸುರೇಶ್ ರೈನಾ ಪ್ರತಿಕ್ರಿಯೆ ನೀಡಿದ್ದು, ‘ರವೀಂದ್ರ ಜಡೇಜಾ, ಅಂಬಟಿ ರಾಯುಡು, ರಾಬಿನ್ ಊತಪ್ಪ ಹಾಗೂ ಡ್ವೇನ್ ಬ್ರಾವೊ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದಿದ್ದಾರೆ.
ಎಂಎಸ್ ಧೋನಿಯ ಉತ್ತರಾಧಿಕಾರಿಯಾಗಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಅವರಿಗಿದೆ ಎಂದಿದ್ದಾರೆ.
ಇದೇ ವೇಳೆ ಕಾಮೆಂಟೇಟರ್ ಆಗಿರುವ ಬಗ್ಗೆ ಮಾತನಾಡಿದ ರೈನಾ, ನಾನು ಇದಕ್ಕೆ ಸಿದ್ಧನಿದ್ದೇನೆ.
ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ.. ನನ್ನ ಅನೇಕ ಸ್ನೇಹಿತರು ಈಗಾಗಲೇ ಕಾಮೆಂಟೇಟರ್ ಆಗಿದ್ದಾರೆ.
ರವಿ ಭಾಯ್ (ರವಿ ಶಾಸ್ತ್ರಿ) ಕೂಡ ಈ ಸೀಸನ್ ಐಪಿಎಲ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
ಅವರೆಲ್ಲರೊಂದಿಗೆ, ಈ ಕಾರ್ಯವು ನನಗೆ ಸುಲಭವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ರೈನಾ. suresh-raina-picks-these-who-can-replace-dhoni