Suresh Raina | ದೇಶೀಯ ಕ್ರಿಕೆಟ್ ನಿಂದ ರೈನಾ ನಿವೃತ್ತಿ
ವಿದೇಶಿ ಲೀಗ್ ನೊಂದಿಗೆ ರೈನಾ ಒಪ್ಪಂದ
ಶೀಘ್ರದಲ್ಲಿಯೇ ದೇಶಿ ಕ್ರಿಕೆಟ್ ಗೆ ವಿದಾಯ
ಐಪಿಎಲ್ ನಲ್ಲಿ ಅನ್ ಸೋಲ್ಡ್ ಆಗಿದ್ದ ರೈನಾ
ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಸುರೇಶ್ ರೈನಾ ಅವರು ಶೀಘ್ರದಲ್ಲಿಯೇ ದೇಶಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಲಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ ದೇಶಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ವಿದೇಶಿ ಲೀಗ್ ನಲ್ಲಿ ರೈನಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆದಿದ್ದ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ಯಾಟ್ ಬೀಸಿದ್ದರು.
ಆದ್ರೆ 2022ರ ಮೆಗಾ ಹರಾಜಿನಲ್ಲಿ ಸುರೇಶ್ ರೈನಾ ಅವರನ್ನು ರಿಟೈನ್ಡ್ ಮಾಡಿಕೊಳ್ಳದ ಚೆನ್ನೈ ಸೂಪರ್ ಕಿಂಗ್ಸ್, ಹರಾಜಿನಲ್ಲಿಯೂ ಅವರನ್ನ ಖರೀದಿಸಲಿಲ್ಲ.
ಬ್ಯಾಡ್ ಫಾರ್ಮ್ ನಿಂದಾಗಿ ಉಳಿದ ಫ್ರಾಂಚೈಸಿಗಳು ಕೂಡ ರೈನಾ ಕಡೆ ಮುಖ ಮಾಡಲಿಲ್ಲ.

ಹೀಗಾಗಿ ರೈನಾ ಅನ್ ಸೋಲ್ಡ್ ಆದರು. ಮೊದಲೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದ ರೈನಾ ಇದರೊಂದಿಗೆ ಐಪಿಎಲ್ ಅವಕಾಶವನ್ನು ಕಳೆದುಕೊಂಡಿದ್ದರು.
ಈ ನಡುವೆ ಸುರೇಶ್ ರೈನಾ ವಿದೇಶ ಲೀಗ್ ಗಳಲ್ಲಿ ಆಡಲು ನಿರ್ಧಾರ ಮಾಡಿದ್ದಾರೆ. ಸುರೇಶ್ ರೈನಾ ವಿದೇಶಿ ಲೀಗ್ ಗಳಲ್ಲಿ ಭಾಗಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ನಾನು ಇನ್ನೂ ಕ್ರಿಕೆಟ್ ಆಡಲು ಬಯಸುತ್ತೇನೆ. ಈಗಾಗಲೇ ನಾನು ಯುಪಿಸಿಎ ಕಡೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಂಡಿದ್ದು, ಬಿಸಿಸಿಐಗೂ ನನ್ನ ನಿರ್ಧಾರವನ್ನು ತಿಳಿಸಿದ್ದೇನೆ.
ವಿಶ್ವದ ಇತರ ಬೇರೆ ಬೇರೆ ಲೀಗ್ ಗಳಲ್ಲಿ ಆಡುವುದಕ್ಕೆ ನಾನು ಬಯಸುತ್ತೇನೆ ಎಂದು ರೈನಾ ಹೇಳಿದ್ದಾರೆ.