Suriya : ನಟ ಸೂರ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್
ಕಾಲಿವುಡ್ ನ ಸ್ಟಾರ್ ಹೀರೋ ಸೂರ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್.
ಅವರು ನಟಿಸಿರುವ ಆಕಾಶಮೇ ನಿ ಹದ್ದುರಾ, ಜೈ ಭೀಮ್ ಸಿನಿಮಾಗಳು ಈಗ ಥಿಯೇಟರ್ ಅಂಗಳಕ್ಕೆ ಬರಲಿದೆ.
ಲಾಕ್ ಡೌನ್ ಟೈಂ ನಲ್ಲಿ ಈ ಸಿನಿಮಾಗಳು ಡೈರೆಕ್ಟರ್ ಆಗಿ ರಿಲೀಸ್ ಆಗಿದ್ವು. ಅಲ್ಲದೇ ಜನಮನ್ನಣೆ ಪಡೆದುಕೊಂಡಿದ್ದವು ಕೂಡ.
ಸುಧಾ ಕೊಂಗರ ನಿರ್ದೇಶನದ ಆಕಾಶಮೇ ನೀ ಹದ್ದುರಾ ಸಿನಿಮಾ ಸೂರ್ಯ ಕೆರಿಯರ್ ನಲ್ಲಿ ಒಂದು ಮೈಲಿಗಲ್ಲು.
ಇನ್ನು ಇದೇ ವರ್ಷದಲ್ಲಿ ಸೂರ್ಯ ನಟನೆಯ ಸಿನಿಮಾ ಜೈ ಭೀಮ್ ಸಹಿತ ಓಟಿಟಿಯಲ್ಲಿ ರಿಲೀಸ್ ಆಗಿತ್ತು.
ಈ ಸಿನಿಮಾಗೆ ದೇಶದಾದ್ಯಂತ ಪ್ರಶಂಸೆಗಳ ಸುರಿಮಳೆಯಾಗಿತ್ತು. ಆದ್ರೆ ಈ ಸಿನಿಮಾಗಳು ಬಿಗ್ ಸ್ಕ್ರೀನ್ ಗೆ ಬರಲಿವೆ.
ಜುಲೈ 23 ರಂದು ಸೂರ್ಯ ಹುಟ್ಟುಹಬ್ಬ ಇರುವುದರಿಂದ ಥಿಯೇಟರ್ ನಲ್ಲಿ ಜುಲೈ 22 ರಂದು ಈ ಸಿನಿಮಾಗಳು ರಿಲೀಸ್ ಆಗಲಿವೆ.