ಅಚ್ಚರಿ ಮೂಡಿಸಿದ ವೈಸ್‌ಕ್ಯಾಪ್ಟನ್‌ ಪಟ್ಟ: ಸಬಾ ಕರೀಮ್‌

1 min read
Team India Saaksha Tv
ಅಚ್ಚರಿ ಮೂಡಿಸಿದ ವೈಸ್‌ಕ್ಯಾಪ್ಟನ್‌ ಪಟ್ಟ: ಸಬಾ ಕರೀಮ್‌ Saaksha Tv

ಹೊಸದಿಲ್ಲಿ: ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಗೆ 18 ಸದಸ್ಯರ ಭಾರತ ತಂಡವನ್ನು ಪ್ರಕಟ ಮಾಡಿತ್ತು. ಭಾರತ ತಂಡದ ನೂತನ ನಾಯಕ ರೋಹಿತ್‌ ಶರ್ಮಾ ಗಾಯದ ಸಮಸ್ಯೆಯಿಂದ ಚೇತರಿಸಿದರ ಕಾರಣ, ಹರಿಣಗಳ ವಿರುದ್ಧದ 3 ಪಂದ್ಯಗಳ ಒಡಿಐ ಸರಣಿಗೆ ಕೆಎಲ್‌ ರಾಹುಲ್‌ ಅವರನ್ನು ನಾಯಕನನ್ನಾಗಿ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ.

Vice Caption Bumra Saaksha Tv

ಆದರೆ  ಈ ಆಯ್ಕೆಯಿಂದ ಅಚ್ಚರಿಗೊಂಡ ಟೀಮ್ ಇಂಡಿಯಾದ ಮಾಜಿ ಸೆಲೆಕ್ಟರ್‌ ಕೂಡ ಆಗಿರುವ ಸಬಾ ಕರೀಮ್‌ ಈ ಬಗ್ಗೆ ಇಂಡಿಯಾ ನ್ಯೂಸ್‌ ಕಾರ್ಯಕ್ರಮದಲ್ಲಿ ಮಾತನಾಡಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಈಗಾಗಗಲೇ ಕ್ಯಾಪ್ಟನ್ಸಿ ವಿಚಾರದಲ್ಲಿ ಸೈ ಎನಿಸಿಕೊಂಡಿರುವ ಶ್ರೇಯಸ್‌ ಅಯ್ಯರ್‌ ಮತ್ತು ರಿಷಭ್ ಪಂತ್‌ (Rishab Pant) ಅವರಂತಹ ಆಟಗಾರರು ತಂಡದಲ್ಲಿ ಇರುವಾಗ, ನಾಯಕತ್ವದಲ್ಲಿ ಅನನುಭವಿಯಾಗಿರುವ ಬುಮ್ರಾಗೆ ಉಪನಾಯಕನ ಪಟ್ಟ ಕೊಟ್ಟಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ರಿಷಭ್ ಪಂತ್‌ಗೆ ಉಪನಾಯಕನ ಜವಾಬ್ದಾರಿ ಹೊರುವ ಸಾಮರ್ಥ್ಯವಿದೆ ಎಂದಿದ್ದಾರೆ. ಟೀಮ್ ಇಂಡಿಯಾದ ಉಪನಾಯಕನ ಸ್ಥಾನಕ್ಕೆ ಬುಮ್ರಾ ಅವರನ್ನು ಆಯ್ಕೆ ಮಾಡುತ್ತಾರೆ ಎಂದು ಖಂಡಿತಾ ನಿರೀಕ್ಷಿಸಿರಲಿಲ್ಲ. ಉಪನಾಯಕನ ಸ್ಥಾನಕ್ಕೆ ರಿಷಭ್ ಪಂತ್‌ ಸೂಕ್ತ ಅಭ್ಯರ್ಥಿ ಎಂಬುದು ನನ್ನ ಅಭಿಪ್ರಾಯ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅವರು ಭಾರತ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು  ಹೇಳಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd