Surrogacy ಅವಳಿ ಮಕ್ಕಳಿಗೆ ಪೋಷಕರಾದ ನಯನತಾರಾ ಮತ್ತು ವಿಘ್ನೇಶ್ ಶಿವನ್
ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳಿಗೆ ಪೋಷಕರಾಗಿದ್ದಾರೆ. ಈ ಸುದ್ದಿಯನ್ನ ವಿಘ್ನೇಶ್ ಇನ್‌ಸ್ಟಾಗ್ರಾಮ್ ಘೋಷಿಸಿದ್ದಾರೆ.
“ನಯನ್ ಮತ್ತು ನಾನು ಅಮ್ಮ ಮತ್ತು ಅಪ್ಪ ಆಗಿದ್ದೇವೆ. ಎಂದು ಬರೆದುಕೊಂಡಿದ್ದಾರೆ. ಗಂಡು ಮಕ್ಕಳಿಗೆ ಉಯಿರ್ ಮತ್ತು ಉಲಗಮ್ ಎಂದು ನಾಮಕರಣ ಮಾಡಿದ್ದಾರೆ.
“ನಮ್ಮೆಲ್ಲರ ಪ್ರಾರ್ಥನೆಗಳು, ನಮ್ಮ ಪೂರ್ವಜರ ಆಶೀರ್ವಾದಗಳು, ಎಲ್ಲಾ ಉತ್ತಮ ಅಭಿವ್ಯಕ್ತಿಗಳೊಂದಿಗೆ, ಆಶೀರ್ವಾದ ರೂಪದಲ್ಲಿ 2 ಶಿಶುಗಳನ್ನ ಪಡೆದಿದ್ದೇವೆ. ನಮ್ಮ ಉಯಿರ್ ಮತ್ತು ಉಲಗಂಗೆ ನಿಮ್ಮೆಲ್ಲರ ಆಶೀರ್ವಾದ ಬೇಕು” ಎಂದು ಕ್ಯಾಪ್ಶನ್ ನೀಡಿದ್ದಾರೆ.
https://www.instagram.com/wikkiofficial/?utm_source=ig_embed&ig_rid=729d779e-a922-445b-a14b-6332c2be2f32
ಚಿತ್ರಗಳಲ್ಲಿ, ನಯನತಾರಾ ಮತ್ತು ವಿಘ್ನೇಶ್ ತಮ್ಮ ಮಕ್ಕಳ ಪುಟ್ಟ ಪಾದಗಳನ್ನು ಚುಂಬಿಸುತ್ತಿರುವುದನ್ನು ಕಾಣಬಹುದು.
ನಯನತಾರಾ ಮತ್ತು ವಿಘ್ನೇಶ್ ಶಿವನ್ ಈ ವರ್ಷ ಜೂನ್ 9 ರಂದು ಚೆನ್ನೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಯನತಾರಾ ಇತ್ತೀಚೆಗೆ ಚಿರಂಜೀವಿ, ಜೊತೆ ನಟಿಸಿದ ಗಾಡ್‌ಫಾದರ್‌ನಲ್ಲಿ ಕಾಣಿಸಿಕೊಂಡರು. ಶಾರುಖ್ ಖಾನ್ ಜೊತೆ ಅಟ್ಲೀ ನಿರ್ದೇಶನದ ಜವಾನ್ ಚಿತ್ರದಲ್ಲೂ ನಟಿಸುತ್ತಿದ್ದಾರೆ.
Surrogacy : Nayanthara And Vignesh Shivan Welcome Twin Sons Uyir And Ulagam