ಬೆಂಗಳೂರು : ಕೋವಿಡ್-19 ಸೋಂಕನ್ನು ಸಮರ್ಪಕವಾಗಿ ನಿಯಂತ್ರಿಸುವ ಉದ್ದೇಶದಿಂದ ಬಿಬಿಎಂಪಿ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೊರ ದೇಶ/ರಾಜ್ಯಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿರಬೇಕು. ಅಂತಹವರ ಮೇಲೆ ನಿಗಾವಹಿಸುವ ಸಲುವಾಗಿ ವಿಧಾನಸಭಾ ಕ್ಷೇತ್ರ ವಾರು ಕಣ್ಗಾವಲು ತಂಡಗಳನ್ನು ಬಿಬಿಎಂಪಿ ನಿಯೋಜನೆ ಮಾಡಿದೆ.
ಪಾಲಿಕೆಯ ಕೇಂದ್ರ ಕಛೇರಿ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆ ಮುಂಭಾಗದಲ್ಲಿ ಕಣ್ಗಾವಲು ತಂಡಗಳಿಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅಧಿಕೃತ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ,ಕೋವಿಡ್-19 ಸೋಂಕನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರವು ಕಾರ್ಯಪಡೆಯನ್ನು ರಚಿಸಿ, ಅದಕ್ಕೆ ಬಿಬಿಎಂಪಿ ಆಯುಕ್ತರು ರವರನ್ನು ಮುಖ್ಯಸ್ಥರನ್ನಾಗಿ ನಿಯೋಜಿಸಲಾಗಿದೆ. ಹಿರಿಯ ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುವಂತೆ ಸೂಚಿಸಲಾಗಿದೆ. ಅದರಂತೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ಹೋಮ್ ಕ್ವಾರಂಟೈನ್ ವೀಕ್ಷಣೆ ಜವಾಬ್ದಾರಿಯನ್ನು ವಹಿಸಲಾಗಿದೆ. ಹೊರ ದೇಶ/ರಾಜ್ಯದಿಂದ ಬಂದಂತಹ ಪ್ರಯಾಣಿಕರ ಮೇಲೆ ನಿಗಾವಹಿಸಲು ವಿಧಾನಸಭಾ ಕ್ಷೇತ್ರವಾರು ಕಣ್ಗಾವಲು ತಂಡಗಳನ್ನು ನಿಯೋಜನೆ ಮಾಡಲಾಗಿದೆ.
ಮಹಾರಾಷ್ಟ, ದೆಹಲಿ ಹಾಗೂ ತಮಿಳುನಾಡುನಿಂದ ಬರುವವರನ್ನು ಸಾಂಸ್ಥಿಕ ಗೃಹ ದಿಗ್ಬಂಧನಲ್ಲಿರಿಸಲಾಗುತ್ತಿದೆ. ಉಳಿದಂತೆ ಹೊರ ದೇಶ ಮತ್ತು ರಾಜ್ಯಗಳಿಂದ ವಿಮಾನ, ರೈಲು ಹಾಗೂ ರಸ್ತೆ ಮಾರ್ಗದಲ್ಲಿ ವಾಹಗಳ ಮೂಲಕ ಬರುವಂತಹವರಿಗೆ ಸ್ಟಾಂಪಿಂಗ್ ಮಾಡಿ 14 ದಿನಗಳ ಕಾಲ ಕಡ್ಡಾಯವಾಗಿ ಗೃಹಬಂಧನದಲ್ಲಿ ಇರುವಂತೆ ಸೂಚನೆ ನೀಡಲಾಗುತ್ತದೆ. ಈ ಪೈಕಿ ಅಂತಹ ಪ್ರಯಾಣಿಕರು 14 ದಿನಗಳ ಕಾಲ ಮನೆಯಲ್ಲೇ ಇದ್ದಾರೆಯೇ ಎಂಬುದರ ಬಗ್ಗೆ ನಿಗಾವಹಿಸಲು ಕಣ್ಗಾವಲು ತಂಡಗಳ್ನು ನಿಯೋಜನೆ ಮಾಡಲಾಗಿದೆ. ಅವರು ನಿಯಮ ಪಾಲಿಸದೆ ಹೊರಗಡೆ ಬಂದರೆ ಆರೋಗ್ಯ ಇಲಾಖೆಗೆ ಸಂದೇಶ ರವಾನೆಯಾಗಲಿದೆ. ಆಗ ಗೃಹ ಬಂಧನದಲ್ಲಿರುವ ಪ್ರಯಾಣಿಕರು ನಿಯಮ ಪಾಲಿಸದೆ ಮನೆಯಿಂದ ಹೊರಗಡೆ ಬಂದಂತಹ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಆರೋಗ್ಯ ಇಲಾಖೆ ವತಿಯಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಲಿದೆ. ಅಲ್ಲದೆ ಕಣ್ಗಾವಲು ತಂಡ ಮನೆಗೆ ಭೇಟಿ ಎಚ್ಚರಿಕೆ ನೀಡಲಿದ್ದಾರೆ. ಅದನ್ನೂ ಮೀರಿ ಹೊರಗೆ ಬಂದಂತಹವರನ್ನು ಸಾಂಸ್ಥಿಕ ಗೃಹ ದಿಗ್ಬಂಧನ ದಲ್ಲಿರಿಸುವ ಜೊತೆಗೆ ಎಫ್.ಐ.ಆರ್ ದಾಖಲಿಸಲಾಗುವುದೆಂದು ಹೇಳಿದರು.
ಕಾರ್ಯಕ್ರದಮಲ್ಲಿ ರಾಮಮೋಹನ ರಾಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಮಂಜುನಾಥ್ ರಾಜು.ಜಿ, ಪಾಲಿಕೆ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಸಿ.ಆ.ಸು.ಇ(ಆಸು) ಕಾರ್ಯದರ್ಶಿ ಮುನೀಶ್ ಮೌದ್ಗಿಲ್, ವಿಶೇಷ ಆಯುಕ್ತರುಗಳಾದ ಡಿ.ರಂದೀಪ್, ಮಂಜುನಾಥ್, ಅಪರ ಪೊಲೀಸ್ ಆಯುಕ್ತರು ಮುರುಗನ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.