Surya Grahan 2022: 27 ವರ್ಷಗಳ ಬಳಿಕ ದೀಪಾವಳಿಯ ಅಮವಾಸ್ಯೆಯಂದು ಸೂರ್ಯ ಗ್ರಹಣ…
ಅಕ್ಟೋಬರ್ 25 ರಂದು ಈ ವರ್ಷದ ಎರಡನೇ ಸೂರ್ಯಗ್ರಹಣ ಸಂಭವಿಸಿಲಿದೆ. 27 ವರ್ಷಗಳ ಬಳಿಕ ದೀಪಾವಾಳಿಯ ಹಬ್ಬದಂದೇ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಈ ಗ್ರಹಣ 2022 ರ ಕೊನೆಯ ಮತ್ತು ಎರಡನೇ ಸೂರ್ಯಗ್ರಹಣವಾಗಿದೆ. ಈ ಬಾರಿ ಕಾರ್ತಿಕ ಅಮವಾಸ್ಯೆ ಅಂದರೆ ದೀಪಾವಳಿಯು ಅಕ್ಟೋಬರ್ 24 ಮತ್ತು 25 ಎರಡು ದಿನ ಆಚರಿಸಲಾಗುತ್ತದೆ.
ಅಕ್ಟೋಬರ್ 25 ರಂದು ಸೂರ್ಯ ಗ್ರಹಣ ಸಂಜೆ 4:40 ರಿಂದ 5:24 ರವರೆಗೆ ಇರುತ್ತದೆ. ಗ್ರಹಣದ ಸೂತಕ ಕಾಲವು ಇದಕ್ಕಿಂತ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಈ ಸೂರ್ಯಗ್ರಹಣದ ಸ್ಪರ್ಶ ಭಾರತದಲ್ಲಿ ರಾತ್ರಿ 11.28 ಕ್ಕೆ ಪ್ರಾರಂಭವಾಗಿ ಮೋಕ್ಷವು ಸುಮಾರು 07:05 ಗಂಟೆಗಳ ನಂತರ ಸಂಜೆ 5.24 ಕ್ಕೆ ಸಂಭವಿಸುತ್ತದೆ. ಅದೇ ಗ್ರಹಣದ ಸೂತಕವು 12 ಗಂಟೆಗಳ ಮೊದಲು ಅಂದರೆ ಅಕ್ಟೋಬರ್ 24 ರ ರಾತ್ರಿ 11:28 ರಿಂದ ಪ್ರಾರಂಭವಾಗುತ್ತದೆ. ಆದ್ದರಿಂದ, ದೀಪಾವಳಿಯ ಮರುದಿನ ಬೆಳಿಗ್ಗೆ ಗ್ರಹಣದ ಸೂತಕ ಕಾಲ ಇರುತ್ತದೆ.
ಧರ್ಮಗ್ರಂಥಗಳ ಪ್ರಕಾರ, ಸೂತಕದ ಸಮಯದಲ್ಲಿ ಮೂರ್ತಿ ಪೂಜೆಯನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ತುಳಸಿ ಎಲೆಗಳನ್ನು ಆಹಾರ ಪದಾರ್ಥಗಳಲ್ಲಿ ಇಡುತ್ತಾರೆ. ಇದಲ್ಲದೆ, ಗ್ರಹಣದ ನಂತರ ದೇವಾಲಯಗಳನ್ನು ಸ್ವಚ್ಛಗೊಳಿಸಿದ ನಂತರವೇ ಪೂಜೆ ಪ್ರಾರಂಭವಾಗುತ್ತದೆ.
ಈ ಗ್ರಹಣದ ಪರಿಣಾಮ ವಿವಿಧ ರಾಶಿಗಳ ವಿವಿಧ ಜನರ ಮೇಲೆ ಪ್ರಭಾವ ಬೀರಲಿದೆ. ಕೆಲವು ರಾಶಿಗಳಿಗೆ ಈ ಗ್ರಹಣ ತುಂಬಾ ಮಂಗಳಕರವಾದ ಸಮಯವನ್ನ ತಂದರೇ. ಕೆಲವರಿಗೆ ಸಮಯವ ತುಂಬಾ ಕೆಟ್ಟದಾಗಿರಲಿದೆ. ಆದ್ದರಿಂದಲೇ ಗ್ರಹಣ ಕಾಲದಲ್ಲಿ ದೇವರ ನಾಮಸ್ಮರಣೆ ಮಾಡುತ್ತಾ ಬಂದಿದ್ದಾರೆ ಹಿರಿಯರು. ಈ ಗ್ರಹಣದಿಂದ ಮೀನ ರಾಶಿಯವರಿಗೆ ಸ್ವಲ್ಪ ಅಶುಭವಾಗಲಿದ್ದು, ಸಿಂಹ ರಾಶಿಯವರಿಗೆ ಧನ ಲಾಭವಾಗಲಿದೆ. ಇದಲ್ಲದೇ ಧನು ರಾಶಿ ಮತ್ತು ಮಕರ ರಾಶಿಯವರಿಗೆ ಈ ಗ್ರಹಣದಿಂದ ಲಾಭವಾಗಲಿದೆ.
Surya Grahan 2022: Solar Eclipse on Diwali New Moon After 27 Years…