Suryakumar Yadav : ಸತತ ಡಕೌಟ್, ಸೂರ್ಯನಿಗೆ ಹಿಡಿದ ವೈಫಲ್ಯದ ಗ್ರಹಣ….
ಭವಿಷ್ಯದ ಸ್ಟಾರ್ ಬ್ಯಾಟ್ಸ್ ಮನ್, ಭಾರತದ ಎಬಿಡಿ, 360 ಡಿಗ್ರಿ ಪ್ಲೇಯರ್ ಎಂದೇ ಗುರುತಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ಸೂರ್ಯಕುಮರ್ ಯಾದವ್ ಇತ್ತೀಚೆಗೆ ಸತತ ವೈಫಲ್ಯವನ್ನ ಎದುರಿಸುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಸತತ ಮೂರು ಪಂದ್ಯಗಲ್ಲಿ ಮೊದಲ ಎಸೆತದಲ್ಲಿಯೇ ಡಕ್ ಔಟ್ ಆಗುವ ಮೂಲಕ ಬಂದ ಕೆಲಸಕ್ಕೆ ಸುಂಕವಿಲ್ಲದೇ ವಾಪಸ್ ಆಗಿದ್ದಾರೆ.
ರನ್ ಗಳಿಸಿದೇ ಔಟಾದರೇ ಅದನ್ನ ಡಕೌಟ್ ಎಂದು ಕರೆಯಲಾಗುತ್ತದೆ. ಮೊದಲ ಎಸೆತದಲ್ಲಿಯೇ ಶೂನ್ಯಕ್ಕೆ ರನ್ ಗಳಿಸಿ ಔಟಾದರೇ ಅದನ್ನ ಗೋಲ್ಡನ್ ಡಕ್ ಔಟ್ ಎಂದು ಕರೆಯಲಾಗುತ್ತಿದೆ. ಆದರೇ 360 ಡಿಗ್ರಿ ಆಟಗಾರ ಎಂದೇ ಗುರುತಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಸತತ ಮೂರು ಬಾರಿ ಗೋಲ್ಡನ್ ಡಕ್ ಔಟ್ ಆಗಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದ ಸೂರ್ಯ ಮೂರನೇ ಪಂದ್ಯದಲ್ಲಿ ಆಶ್ಟನ್ ಅಗರ್ ಎಸೆತದಲ್ಲಿ ಬೌಲ್ಡ್ ವಿಕೆಟ್ ಒಪ್ಪಿಸಿದರು. ಬಹಳ ಅಪರೂಪವಾಗಿ ಈ ರೀತಿ ಸತತವಾಗಿ ಆಟಗಾರರು ಗೋಲ್ಡನ್ ಡಕ್ ಔಟ್ ಆಗುತ್ತಾರೆ.
ಈ ಹಿಂದೆ ಕೆಲವು ಆಟಗಾರರು ಏಕದಿನ ಪಂದ್ಯಗಳಲ್ಲಿ ಈ ರೀತಿ ಔಟಾದಿದ್ದಾರೆ. ಸಚಿನ್ ತೆಂಡೂಲ್ಕರ್ (1994), ಅನಿಲ್ ಕುಂಬ್ಳೆ (1996), ಜಹೀರ್ ಖಾನ್ (2003-04), ಇಶಾಂತ್ ಶರ್ಮಾ (2010-11) ಮತ್ತು ಜಸ್ಪ್ರೀತ್ ಬುಮ್ರಾ (2017-18) ಈ ರೀತಿ ಗೋಲ್ಡನ್ ಡಕ್ ಔಟ್ ಆಗಿರುವ ಭಾರತೀಯ ಆಟಗಾರರಾಗಿದ್ದಾರೆ. ಇದೀಗ ಆ ಪಟ್ಟಿಗೆ ಸೂರ್ಯ ಕುಮಾರ್ ಯಾದವ್ ಕೂಡ ಸೇರಿಕೊಂಡಿದ್ದಾರೆ. ಸತತ ಮೂರು ಗೋಲ್ಡನ್ ಡಕ್ ಔಟ್ ಆದ ಆರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಸೂರ್ಯ ಕುಮರ್ ಸತತ ವೈಫಲ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲದೆ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಗೆ ಅವಕಾಶ ಕೊಡದಿದ್ದಕ್ಕೆ ಅಭಿಮಾನಿಗಳು ಆಯ್ಕೆಗರಾರರ ಮೇಲೆ ಕಿಡಿಕಾರಿದ್ದಾರೆ. ಆದರೆ, ಹಿರಿಯ ಆಟಗಾರರು ಸೂರ್ಯಕುಮಾರ್ ಯಾದವ್ ಪರ ನಿಂತಿದ್ದಾರೆ. ಈ ಟೂರ್ನಿಯನ್ನು ಬಿಟ್ಟು ಮುಂಬರುವ ಐಪಿಎಲ್ನತ್ತ ಗಮನ ಹರಿಸುವಂತೆ ಸುನಿಲ್ ಗವಾಸ್ಕರ್, ಸೂರ್ಯ ಕುಮಾರ್ ಯಾದವ್ ಅವರಿಗೆ ಸಲಹೆ ನೀಡಿದ್ದಾರೆ. ಮುಂಬರುವ ಐಪಿಎಲ್ನಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ.
Suryakumar Yadav : Consecutive duckout, Eclipse of failure caught by Surya….