ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಹಲವಾರು ಮಹತ್ವದ ಬೆಳವಣಿಗೆಗಳು ಆಗಿವೆ. ಅದರಲ್ಲೂ ಸುಸಾಂತ್ ಪ್ರೇಯಸಿ ರೆಹಾ ವಿರುದ್ಧ ಕೆಕೆ ಸಿಂಗ್ ಬಿಹಾರದಲ್ಲಿ ಎಫ್ ಐಆರ್ ದಾಖಲಿಸಿದಾಗಿನಿಂದಲೂ ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ರೆಹಾ ತಮ್ಮ ಮುಂಬೈನ ನಿವಾಸದಿಂದ ಎಸ್ಕೇಪ್ ಆಗಿದ್ದು ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದಷ್ಟೇ ಅಲ್ಲದೇ ಒಂದೊಂದೇ ಆರೋಪಗಳು ರೆಹಾ ವಿರುದ್ಧ ಕೇಳಿ ಬರ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರೆಹಾ ಬಂಧನಕ್ಕೆ ಒತ್ತಡಗಳು ಹೆಚ್ಚಾಗಿವೆ.
ಇದೀಗ ಸುಶಾಂತ್ ಸಾವಿನ ಬಳಿಕ ಮೊದಲ ಬಾರಿಗೆ ವಿಡಿಯೋ ಒಂದನ್ನ ಹರಿಬಿಟ್ಟಿರುವ ರೆಹಾ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಸುಳ್ಳುಗಳನ್ನು ಹೇಳಲಾಗುತ್ತಿದೆ.ನಾನೇನು ತಪ್ಪು ಮಾಡಿಲ್ಲ. ನನಗೆ ದೇವರ ಮೇಲೆ ಹಾಗೂ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪೂರ್ಣ ನಂಬಿಕೆ ಇದೆ. ಈ ಪ್ರಕರಣ ಸದ್ಯ ನ್ಯಾಯಾಲಯದಲ್ಲಿ ಇರುವ ಹಿನ್ನೆಲೆ ಯಾವುದಕ್ಕೂ ಪ್ರತಿಕ್ರಿಯಿಸದಂತೆ ನಮ್ಮ ವಕೀಲರು ಸೂಚಿಸಿದ್ದಾರೆ. ಆದರೆ ಸತ್ಯಕ್ಕೆ ಜಯವಾಗಲಿದೆ. ಸತ್ಯಮೇವ ಜಯತೆ, ಸತ್ಯ ಹೊರಗೆ ಬಂದೇ ಬರುತ್ತೆ ಎಂದು ಹೇಳಿಕೊಂಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.