ಬಾಲಿವುಡ್ ನಟ ಸುಶಾಂತ್ ಸಾವು ಆತ್ಮಹತ್ಯೆಯೋ ಅಥವ ಕೊಲೆಯೋ ಎಂಬ ಚರ್ಚೆಗಳು ತಾರಕ್ಕೇರಿರುವ ಬೆನ್ನಲ್ಲೇ , ಈ ಕೇಸ್ ನಲ್ಲಿ ದಿನಕ್ಕೊಂದು ಟಿಸ್ಟ್ ಸಿಗ್ತಿದೆ. ಇದೀಗ ಸುಶಾಂತ್ ಅವರ ತಂದೆ ಕೆಕೆ ರಜಪೂತ್ ಅವರೇ ಸುಶಾಂತ್ ಪ್ರೇಯಸಿ ರೆಹಾ ಚಕ್ರಬೊರ್ತಿ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಹೌದು ಆತ್ಮಹತ್ಯೆಗೆ ಪ್ರೇರೇಪಣೆ ಜೊತೆಗೆ ಕಳ್ಳತನ, ಮಾನಸಿಕವಾಗಿ ಕಿರುಕುಳ ನೀಡಿರುವುದಾಗಿ ರೆಹಾ ಚಕ್ರಬೊರ್ತಿ ಮಾತ್ರವಲ್ಲದೆ ಆಕೆಯ ಕುಟುಂಬ ಸದಸ್ಯರ ವಿರುದ್ಧವೂ ದೂರು ನೀಡಿದ್ದಾರೆ. ಕೆಕೆ ರಜಪೂತ್ ಹೇಳಿಕೆ ಆಧಾರದ ಮೇಲೆ ಬಿಹಾರ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ಶುರುಮಾಡಿದ್ದಾರೆ. ಮತ್ತೊಂದೆಡೆ ಒಂದೇ ವರ್ಷದಲ್ಲಿ ರೆಹಾ ಚಕ್ರಬೊರ್ತಿ ಸುಶಾಂತ್ ಖಾತೆಯಿಂದ ತಮ್ಮ ಖಾತೆಗೆ ಬರೋಬ್ಬರಿ 15 ಕೋಟಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿಯೂ ಬಯಲಾಗಿದ್ದು, ನೆಟ್ಟಿಗರ ಅನುಮಾನ ರೆಹಾ ಚಕ್ರಬೊರ್ತಿ ಮೇಲೂ ತಿರುಗುವಂತೆ ಮಾಡಿದೆ. ರೆಹಾ ಜೊತೆಗೆ ಆಕೆಯ ಪರಿವಾರದವರನ್ನು ಒಳಗೊಂಡಂತೆ ಒಟ್ಟು 6 ಜನರ ವಿರುದ್ಧ ಕೇಸ್ ದಾಖಲಾಗಿದ್ದು, ಈ ಪ್ರಕರಣ ಮುಂದಿನ ದಿನಗಳಲ್ಲಿ ಬೇರೆ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. 
ನೌಕರರ ದಶಕದ ಕನಸಿಗೆ ಜೀವ ತುಂಬಿದ ಕಾಂಗ್ರೆಸ್ ಸರ್ಕಾರ: ಒಪಿಎಸ್ ಜಾರಿಗೆ ಸಿಎಂ ಮತ್ತು ಡಿಸಿಎಂ ಗ್ರೀನ್ ಸಿಗ್ನಲ್
ತುಮಕೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಶಿಕ್ಷಕರ ದಶಕಗಳ ಕಾಲದ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಹೊಸ ಪಿಂಚಣಿ ಪದ್ಧತಿಯನ್ನು (NPS) ರದ್ದುಗೊಳಿಸಿ, ಹಳೇ ಪಿಂಚಣಿ...








