ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಗೆ ಆಂಜಿಯೋಪ್ಲ್ಯಾಸ್ಟಿ – ಸ್ಟಂಟ್ ಅಳವಡಿಕೆ
ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಹೃದಯಾಘಾತಕ್ಕೊಳಗಾಗಿದ್ದರು ಎಂಬ ಸುದ್ದಿ ನಿನ್ನೆ ದಿನ ಅಭಿಮಾನಿಗಳ ಆಂತಂಕಕ್ಕೆ ಕಾರಣವಾಗಿತ್ತು. ಇದೀಗ ಹೃದಯಾಘಾತದ ಆತಂಕದ ಕ್ಷಣಗಳನ್ನ ನಟಿ ಸೊಶೀಯಲ್ ಮೀಡಿಯಾ ದಲ್ಲಿ ಬಿಚ್ಚಿಟ್ಟಿದ್ದಾರೆ.
‘ಹೃದಯಾಘಾತವಾದಾಗ ನನಗೂ ಆತಂಕವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಾದೆ. ನನಗೆ ಆಗ ಆಂಜಿಯೋಪ್ಲ್ಯಾಸ್ಟಿ ಮಾಡಿ, ಸ್ಟಂಟ್ ಹಾಕಿದ್ದಾರೆ. ವೈದ್ಯರು ನನ್ನೊಂದಿಗೆ ಮಾತನಾಡುತ್ತಾ ನನ್ನ ಹೃದಯ ವಿಶಾಲವಾಗಿದೆ ಮತ್ತು ಪ್ರೀತಿಯಿಂದ ತುಂಬಿದೆ ಎಂದಿದ್ದಾರೆ. ಹಾಗಾಗಿ ನಾನು ನೆಮ್ಮದಿಯಿಂದ ಇದ್ದೇನೆ. ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದಿದ್ದಾರೆ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್.
ನಟಿ ಸುಶ್ಮಿತಾ ಸೇನ್ ಗೆ ಮೂರ್ನಾಲ್ಕು ದಿನಗಳ ಹಿಂದೆಯೇ ಹೃದಯಾಘಾತಕ್ಕೆ ಒಳಗಾಗಿದ್ದರೂ ಈ ವಿಚಾರ ನಿನ್ನೆ ಮಾಧ್ಯಮಗಳ ಮೂಲಕ ತಿಳಿದಿತ್ತು. ನಂತರ ಅಭಿಮಾನಿಗಳು ನಿಮ್ಮ ಆರೋಗ್ಯ ಹೇಗಿದೆ ಎಂದು ಪ್ರಶ್ನೆ ಮಾಡಿದ್ದರು. ಸುಶ್ಮಿತಾ ಅವರೇ ಹೇಳಿಕೊಂಡಂತೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡಿದ್ದರಿಂದ ಗುಣಮುಖರಾಗುತ್ತಿರುವ ವಿಚಾರವನ್ನೂ ಅವರು ತಿಳಿಸಿದ್ದಾರೆ. ತಮ್ಮ ತಂದೆಯು ಈ ಸಮಯದಲ್ಲಿ ಧೈರ್ಯ ನೀಡಿದ್ದನ್ನೂ ಅವರು ಸ್ಮರಿಸಿಕೊಂಡಿದ್ದಾರೆ.
Sushmita Sen: Former Miss World Sushmita Sen undergoes Angioplasty – Stunt Implantation