ಬಳ್ಳಾರಿ: ಶಂಕಿತ ಡೆಂಗ್ಯೂವಿಗೆ (Dengue) 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿಯಲ್ಲಿ ನಡೆದಿದೆ. ಸಾವನ್ನಪ್ಪಿದ ಬಾಲಕನನ್ನು ಪ್ರದೀಪ್ ಆಚಾರಿ (5) ಎಂದು ಗುರುತಿಸಲಾಗಿದೆ.
ಒಂದು ವಾರದಲ್ಲಿ ಸಿದ್ದಮ್ಮನಹಳ್ಳಿಯಲ್ಲಿ 20ಕ್ಕೂ ಅಧಿಕ ಜನರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಪ್ರತೀ ನಿತ್ಯ ಸೋಂಕಿತರು ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಹೀಗಾಗಿ ಗ್ರಾಮ ಸೇರಿದಂತೆ ಬಳ್ಳಾರಿ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದಲ್ಲಿ ಬಾಲಕ ಡೆಂಗ್ಯೂ ಪ್ರಕರಣಕ್ಕೆ ಬಲಿಯಾದರೂ ಗ್ರಾಪಂನವರು ಮಾತ್ರ ಫಾಗಿಂಗ್ ಮಾಡುತ್ತಿಲ್ಲ ಎಂದು ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.








