ಅನುಮಾನಾಸ್ಪದವಾಗಿ ಓಡಾಡುವ ಕೋಳಿಯನ್ನು ವಶಕ್ಕೆ ಪಡೆದ ಪೊಲೀಸರು Saaksha Tv
ವಾಷಿಂಗ್ಟನ್: ಅನುಮಾನಾಸ್ಪದವಾಗಿ ಓಡಾಡುತ್ತಿದೆ ಎಂದು ಕೋಳಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಚಿತ್ರವಾದ ಘಟನೆ ವಾಷಿಂಗ್ಟನ್ ನಲ್ಲಿ ನಡೆದಿದೆ.
ಅಮೇರಿಕಾದ ಸೇನಾ ಕಚೇರಿ ಇರುವ ಪೆಂಟಗನ್ ನ ಭದ್ರತಾ ಏರಿಯಾ ಸುತ್ತ ಕೋಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರಿಂದ ಅದನ್ನು ಪಡೆದಿದ್ದಾರೆಂದು ಅಮೆರಿಕಾದ ಪ್ರಾಣಿ ದಯಾ ಸಂಘ ಮಾಹಿತಿ ನೀಡಿದೆ.
ಕೋಳಿಯನ್ನು ಹೆನ್ನಿ ಪೆನ್ನಿ ಎಂದು ಕರೆಯಲಾಗುತ್ತಿದೆ. ಸದ್ಯ ಆ ಕೋಳಿಯನ್ನು ವರ್ಜೀನಿಯಾದಲ್ಲಿ ಕೋಳಿ ಫಾರ್ಮ್ ಹೊಂದಿರುವ ವ್ಯಕ್ತಿಯೊಬ್ಬರು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ಕೋಳಿ ಎಲ್ಲಿಂದ ಬಂತು? ಪೆಂಟಗನ್ ಏರಿಯಾ ಒಳಗೆ ಹೇಗೆ ಬಂತು ಎಂದು ಅಧಿಕಾರಿಗಳು ತನಿಕೆ ನಡೆಸುತ್ತಿದ್ದಾರೆ.









