ಇಷ್ಟುದಿನಗಳ ಕಾಲ ಕೊರೊನಾ ಸೋಂಕು ಪತ್ತೆ ಹಚ್ಚಲು ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಇನ್ನುಮುಂದೆ ಕೊರೊನಾ ಪಪರೀಕ್ಷೆಗಾಗಿ ಹೊಸ ಟೆಕ್ನಿಕ್ ಅಳವಡಿಸಿಕೊಳ್ಳುವ ಸಾಧ್ಯತೆಯಿದೆ .
ಹೌದು ಶಂಕಿತ ಸೋಂಕಿತರ ಬಾಯಿ ಮುಕ್ಕಳಿಸಿದ ನೀರಿನಿಂದಲೇ ಕೊರೊನಾ ಪರೀಕ್ಷೆ ಸಾಧ್ಯವಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಅಧ್ಯಯನಯದಲ್ಲಿ ವರದಿಯಾಗಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 50 ಕೊರೊನಾ ಸೋಂಕಿತರಿಂದ ಗಂಟಲು ದ್ರವ ಮಾದರಿ ಮತ್ತು ಬಾಯಿಮುಕ್ಕಳಿಸಿದ ನೀರಿನ ಮಾದರಿಗಳ ಪರೀಕ್ಷೆಯ ಹೋಲಿಕೆಯನ್ನು ನಡೆಸಿ ಅಧ್ಯಯನ ಮಾಡಲಾಗಿದೆ. ನೀರಿನ ಮಾದರಿಗಳಲ್ಲಿ ಎಲ್ಲವೂ ನಿಖರವಾದ ವರದಿಯನ್ನು ನೀಡಿದ್ದು ಸೋಂಕನ್ನು ದೃಢಪಡಿಸಿವೆ.
ಬಾಯಿಮುಕ್ಕಳಿಸಿದ ನೀರಿನ ಮಾದರಿ ಪರೀಕ್ಷೆ ತುಂಬ ಕಡಿಮೆ ವೆಚ್ಚದ್ದಾಗಿದೆ, ಸದ್ಯ ಬಳಕೆಯಲ್ಲಿರುವ ಗಂಟಲು ದ್ರವ ಸಂಗ್ರಹ ವ್ಯವಸ್ಥೆ ಮತ್ತು ಮಾದರಿ ಸಂಗ್ರಹಕಾರರ ಪಿಪಿಇ ಕಿಟ್‌ಗಳ ವೆಚ್ಚವನ್ನು ಕಡಿತಗೊಳಿಸಲು ಸಹ ಇದು ಅನುಕೂಲವಾಗಲಿದೆ ಎನ್ನಲಾಗುತ್ತಿದೆ.