Gadag: ವಿವಿ ಘಟಿಕೋತ್ಸವದಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಿಗೆ ಅಪಮಾನ

1 min read
Gadag Saaksha Tv

ವಿವಿ ಘಟಿಕೋತ್ಸವದಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಿಗೆ ಅಪಮಾನ

ಗದಗ: ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯದಲ್ಲಿ‌ ಬುಧವಾರ 2ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಯ ಸಿಬ್ಬಂದಿ ಆಹ್ವಾನಿತ ಗದಗನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರಿಗೆ ಅವಮಾನಿಸಿದ ಘಟನೆ ನಡೆದಿದೆ.

ವಿವಿಯ 2ನೇ ಘಟಿಕೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಆಗಮಿಸಿದ್ದರು. ಹಾಗೇ ಆಹ್ವಾನಿತರಾದ ಶ್ರೀಗಳು ಆಗಮಿಸಿದಾಗ ಶ್ರೀಗಳನ್ನ ಘಟಿಕೋತ್ಸವಕ್ಕೆ ಬಿಡದೇ ವಾಪಸ್ ಕಳುಹಿಸುವ ಮೂಲಕ ಅವಮಾನಿಸಿದ್ದಾರಂತೆ‌. ಈ ಮೂಲಕ ವಿವಿಗೆ ಕಪ್ಪುಚುಕ್ಕೆ ತಂದಿಟ್ಟಿದ್ದಾರೆ.

ಈ ಕುರಿತು ಮಾತನಾಡಿದ ಶ್ರೀ ಕಲ್ಲಯ್ಯಜ್ಜ ಶ್ರೀಗಳು ನನ್ನ ಕೆಲಸ ಬಹಳಷ್ಟು ಇದ್ದಿದ್ದರಿಂದ ನಾನೇ ಮರಳಿ ಬಂದಿದ್ದೇನೆ ಅಂತ ವಿವಿ ಸಿಬ್ಬಂದಿ ಎಡವಟ್ಟು ಮುಚ್ಚಿಕೊಂಡಿದ್ದಾರೆ. ಆದರೆ ವಿವಿಯ ಕುಲಪತಿ ವಿಷ್ಣುಕಾಂತ ಚಟಪಲ್ಲಿಯವರು ಇದೊಂದು ಪ್ರಮಾದ ಆಗಬಾರದಿತ್ತು. ನಾನೇ ಸ್ವಾಮೀಜಿಗಳನ್ನ ಭೇಟಿ ಮಾಡಿ ಕ್ಷಮೇ ಕೇಳ್ತೇನೆ ಅಂತ ಆಗಿರುವ ತಪ್ಪನ್ನ ಒಪ್ಪಿಕೊಂಡಿದ್ದಾರೆ.

ಇನ್ನೂ ಕಾರ್ಯಕ್ರಮವನ್ನು ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್​​ ಚಾಲನೆ ನೀಡಿದರು. ಹಾಗೇ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗೌರವಿಸಿ ಸನ್ಮಾಯಿಸಲಾಯಿತು. ಹಾಗೇ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ನಿವೃತ್ತ ಐಎಸ್ ಅಧಿಕಾರಿ ಡಾ. ಎಸ್.ಎಸ್ ಮೀನಾಕ್ಷಿ ಸುಂದರಂ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಸೀತವ್ವ ಜೋಡಟ್ಟಿ ಮತ್ತು ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ ರಂಗನಾಥ ಅನುಪಸ್ಥಿತರಾಗಿದ್ದು ಇವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd