ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದ್ದು, ಜಲಪ್ರಳಯವಾಗುವ ಸಾಧ್ಯತೆ ಇದೆ. ಪ್ರಕೃತಿ ಮುನಿದಿದ್ದು ಸರಿಯಾಗಲಿದೆ ಎಂದು ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಭವಿಷ್ಯ ನುಡಿದಿರುವ ಅವರು, ಈ ಜಲಪ್ರಳಯ ಜಾಗತಿಕ ಮಟ್ಟದಲ್ಲಿ ಸಂಭವಿಸಿ ಒಂದೆರಡು ರಾಷ್ಟ್ರಗಳು ಮುಳುಗುವ ಸಾಧ್ಯತೆ ಇದೆ. ಬೇರೆ ಯಾವುದೇ ಪ್ರದೇಶಗಳಲ್ಲಿ ಬಾಂಬ್ ಸ್ಫೋಟದಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ವಿಷಾನಿಲದಿಂದ ಭಾರತದಲ್ಲಿ ಜನಕರು ಅಕಾಲಿಕ ಸಾವನ್ನಪ್ಪಬಹುದು ಎಂದು ಹೇಳಿದ್ದಾರೆ.
ವಿಜಯದಶಮಿಯಿಂದ ಸಂಕ್ರಾಂತಿಯೊಳಗೆ ಜಗತ್ತಿನ ಸಾಮಾಟ್ರರು ತಲ್ಲಣಗೊಳ್ಳುವಂತಹ ದುರ್ಘಟನೆ ರಾಷ್ಟ್ರಮಟ್ಟದಲ್ಲಿ ನಡೆಯಲಿದೆ. ಆಳುವವರು ಅರಿತರೆ ಇದರಿಂದ ಪಾರಾಗಬಹುದು. ಕರುನಾಡಿಗೂ ಕೆಲವು ಆಪತ್ತುಗಳು ಆಗಲಿವೆ. ಸಾವು- ನೋವು ಸಂಭವಿಸಬಹುದು.
ರಾಜ್ಯದಲ್ಲಿ ನಾನು ಹೇಳಿದಂತೆ ಸ್ಥಿರ ಸರ್ಕಾರ ಬಂದಿದೆ. ಒಬ್ಬ ವ್ಯಕ್ತಿಯೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದಂತೆಯೇ ಆಗಿದೆ. ಸದ್ಯದ ಸರ್ಕಾರ ಸ್ಥಿರವಾಗಿಯೇ ಇರುತ್ತದೆ ಎಂಬುವುದಕ್ಕೆ ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ. ಊರಿನಲ್ಲಿನ ಎಲ್ಲವಾಸನೆಯನ್ನೂ ಮೂಗು ಗ್ರಹಿಸುತ್ತದೆ ಎಂದು ವಿಶ್ಲೇಷಿಸಿದರು. ಗ್ಯಾರಂಟಿ ಯೋಜನೆಗಳಿಂದ ಅನುಕೂಲವಾಗಲಿದೆ. ಶಕ್ತಿ ಯೋಜೆಯಿಂದ ಮಹಿಳೆಯರು ಸ್ವತಂತ್ರವಾಗಿ ಪ್ರಯಾಣಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.








