ಸ್ವರ್ಣ ಭಾರತಿ ಸಹಕಾರ ಬ್ಯಾಂಕಿನ ಮೊದಲ ATM ಉದ್ಘಾಟನೆ

1 min read
Swarna Bharti saaksha tv

ಸ್ವರ್ಣ ಭಾರತಿ ಸಹಕಾರ ಬ್ಯಾಂಕಿನ ಮೊದಲ ATM ಉದ್ಘಾಟನೆ

ಬೆಂಗಳೂರು : ನಮ್ಮ ಗ್ರಾಹಕರಿಗೆ ಅತಿ ಉತ್ತಮ ಹಾಗೂ ಹೆಚ್ಚು ಸೇವೆಗಳನ್ನು ನೀಡುವ ಗುರಿಯನ್ನು ಸ್ವರ್ಣ ಭಾರತಿ ಸಹಕಾರ ಬ್ಯಾಂಕು ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಡಾ. ಪಿ ಎಲ್‌ ವೆಂಕಟರಾಮ ರೆಡ್ಡಿ ತಿಳಿಸಿದರು.

ಸ್ವರ್ಣಭಾರತಿ ಸಹಕಾರಿ ಬ್ಯಾಂಕಿನ ಮೊದಲ ಏಟಿಎಂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಂಸ್ಥಾಪನ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕ ಟಿ ಎನ್‌ ಚೌಡಪ್ಪ, ಇಂದು ನಮ್ಮ ಸಹಕಾರಿ ಬ್ಯಾಂಕಿನ ಮೊದಲ ಏಟಿಎಂ ಗೆ ಚಾಲನೆ ನೀಡಲಾಗಿದೆ. ಇತರೆ ಸಹಕಾರ ಬ್ಯಾಂಕುಗಳಿಗಿಂತಲೂ ಅತಿ ಹೆಚ್ಚು ಹಾಗೂ ಅತ್ಯುತ್ತಮ ಸೇವೆಗಳನ್ನು ನಮ್ಮ ಗ್ರಾಹಕರುಗಳಿಗೆ ನೀಡುವ ನಿಟ್ಟಿನಲ್ಲಿ ನಾವು ಕಾರ್ಯತತ್ಪರರಾಗಿದ್ದೇವೆ. ಇದರ ಮೊದಲ ಹೆಜ್ಜೆಯಾಗಿ ಏಟಿಎಂ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ ಎಂದರು.

Swarna Bharti saaksha tv

ಸ್ವರ್ಣಭಾರತಿ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಪಿ ಎಲ್‌ ವೆಂಕಟರಾಮ ರೆಡ್ಡಿ ಅವರು ಮಾತನಾಡಿ, ಠೇವಣಿಗಳಿಗೆ ಹೆಚ್ಚು ಬಡ್ಡಿಯನ್ನು ನೀಡುವ ಮೂಲಕ ಗ್ರಾಹಕ ಸ್ನೇಹಿ ವಾತಾವರಣವನ್ನು ನಾವುಗಳು ನೀಡುತ್ತಿದ್ದೇವೆ. ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ ನಾವುಗಳ ಮುಂಚೂಣಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಹಕ ಸ್ನೇಹೀ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ವರ್ಣಭಾರತಿ ಸಹಕಾರ ಬ್ಯಾಂಕಿನ ನಿರ್ದೇಶಕರುಗಳಾದ ಕೆ. ನರಸಿಂಹ ಮೂರ್ತಿ, ಟಿ ಸತೀಶ್‌ ಬಾಬು, ಆರ್‌ ಹರೀಶ್‌, ಶ್ರೀಮತಿ ಡಾ|| ಲತಾ ನಾರಾಯಣ್‌, ಕೆ ನಾರಾಯಣಸ್ವಾಮಿ, ಬಿ ನಾಗರಾಜ, ಜಿ.ಎಂ ರವೀಂದ್ರ, ಡಿ.ಬಿ ಶರತ್‌ ಕುಮಾರ್‌, ಸಿ ವೆಂಕಟೇಶ್‌, ಎನ್‌. ನಾಗರಾಜ್‌, ಜೆ.ಕೆ ರಾಮಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಮತ್ತು ಹಲವು ಗ್ರಾಹಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd