ಸಿಹಿ ಪೊಂಗಲ್ ಸಂಕ್ರಾಂತಿ Special ಮಾಡೋಣ ಬನ್ನಿ…
ಮಾಡಲು ಬೇಕಾದ ಪದಾರ್ಥಗಳು:
ಹೆಸರು ಬೇಳೆ – ಅರ್ಧ ಕಪ್
ಅಕ್ಕಿ – 1 ಕಪ್
ಬೆಲ್ಲದ ಪುಡಿ
ತುಪ್ಪ
ಗೋಡಂಬಿ
ಒಣ ದ್ರಾಕ್ಷಿ
ಲವಂಗ – 5
ಕೊಬ್ಬರಿ ತುರಿ
ಏಲಕ್ಕಿ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಸಿಹಿ ಪೊಂಗಲ್ ಮಾಡುವ ವಿಧಾನ:
1. ಮೊದಲಿಗೆ ಹೆಸರು ಬೇಳೆ ಹಾಗೂ ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಂದು ಕುಕ್ಕರ್ಗೆ ಹಾಕಿ.
2. ಅಳತೆಯ ಪ್ರಕಾರ 4 ಗ್ಲಾಸ್ ನೀರು ಹಾಕಿ, ಸ್ವಲ್ಪ ಉಪ್ಪು ಹಾಕಿ, ಮುಚ್ಚಳ ಮುಚ್ಚಿ 2 ಸೀಟಿಗಳು ಹೊಡೆಯಲು ಬಿಡಿ.
3. ಮತ್ತೊಂದು ಬಾಣಲೆಗೆ ತುಪ್ಪ ಹಾಕಿ, ಅದರಲ್ಲಿ ಗೋಡಂಬಿ, ಒಣ ದ್ರಾಕ್ಷಿ, ಲವಂಗ ಹಾಕಿ ಫ್ರೈ ಮಾಡಿಕೊಳ್ಳಿ. ಪಾಯಸಕ್ಕೆ ಮಾಡುವಂತೆ ಈ ಪದಾರ್ಥಗಳನ್ನು ಫ್ರೈ ಮಾಡಬೇಕು.
4. 3-4 ಸ್ಪೂನ್ ಕೊಬ್ಬರಿ ಹಾಕಿ ಫ್ರೈ ಮಾಡಿ, ಎಲ್ಲವನ್ನೂ ತೆಗೆದು ಒಂದು ಬೌಲ್ನಲ್ಲಿ ಹಾಕಿ.
5. ಈಗ ಅದೇ ಬಾಣಲೆಗೆ 1 ಕಪ್ ಬೆಲ್ಲದ ಪುಡಿ ಹಾಕಿ. ಕಪ್ಪು ಬೆಲ್ಲ ಇದ್ದರೆ ಹೆಚ್ಚು ರುಚಿಯಾಗಿರುತ್ತದೆ. 2 ಕಪ್ ನೀರು ಮತ್ತು ಏಲಕ್ಕಿ ಪುಡಿ ಹಾಕಿ, ತಿರುಗಿಸುತ್ತಾ ಇರಿ. ಬೆಲ್ಲ ಕರಗಿ ನೀರಾಗಬೇಕು.
6. 2 ಸೀಟಿಗಳು ಹೊಡೆದ ಬಳಿಕ, ಬೇಯುತ್ತಿರುವ ಅನ್ನ ಮತ್ತು ಹೆಸರು ಬೇಳೆಯನ್ನು ಬೆಲ್ಲದ ನೀರಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
7. ಕುದಿಯಲು ಬಿಡಿ, ನಂತರ ಫ್ರೈ ಮಾಡಿರುವ ಗೋಡಂಬಿ, ದ್ರಾಕ್ಷಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
8. ನೀರು ಸ್ವಲ್ಪ ಆವಿಯಾಗುವವರೆಗೂ ಸಣ್ಣ ಉರಿಯಲ್ಲಿ ಇಟ್ಟು, ಮಿಕ್ಸ್ ಮಾಡಿದರೆ, ನಿಮ್ಮ ಸಿಹಿ ಪೊಂಗಲ್ ರೆಡಿಯಾಗುತ್ತದೆ.
ಈ ಸಿಹಿ ಪೊಂಗಲ್ ಹಬ್ಬದಂದು ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತದೆ. ಸಂಕ್ರಾಂತಿ ಹಬ್ಬದಂದು ಮನೆಯಲ್ಲಿ ಈ ರೀತಿ ಸಿಹಿ ಪೊಂಗಲ್ ಮಾಡಿ, ಸ್ವಾದಿಸಿರಿ!