ಬೆಳಗಿನ ತಿಂಡಿಗೆ ಟೇಸ್ಟಿ ಗೆಣಸಿನ ಕಟ್ಲೆಟ್ ಮಾಡೋದು ಹೇಗೆ ತಿಳಿಯೋಣ..
ಬೇಕಾಗುವ ಸಾಮಗ್ರಿಗಳು:
ಗೆಣಸು – 2-3 (ಬೇಯಿಸಿ ಸ್ಮ್ಯಾಶ್ ಮಾಡಿರಿ)
ಈರುಳ್ಳಿ – 1 (ಚಿಕ್ಕದಾಗಿ ಹೆಚ್ಚಿ)
ಕೊತ್ತಂಬರಿ ಸೊಪ್ಪು – 2-3 ಟೇಬಲ್ ಸ್ಪೂನ್ (ಚಿಕ್ಕದಾಗಿ ಹೆಚ್ಚಿ)
ಶುಂಠಿ ಪೇಸ್ಟ್ – 1 ಟೀಸ್ಪೂನ್
ಗರಂ ಮಸಾಲ – 1 ಟೀಸ್ಪೂನ್
ಕಾರದ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – 1 ಟೀಸ್ಪೂನ್
ದನಿಯಾ ಪುಡಿ – 1 ಟೀಸ್ಪೂನ್
ಚಾಟ್ ಮಸಾಲ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಅಕ್ಕಿ ಹಿಟ್ಟು – 4 ಟೇಬಲ್ ಸ್ಪೂನ್
ಎಣ್ಣೆ – ಕರಿಯಲು
ಮಾಡುವ ವಿಧಾನ:
1. ಮೊದಲು ಬೇಯಿಸಿದ ಗೆಣಸನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ.
2. ಇದಕ್ಕೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿ ಪೇಸ್ಟ್ ಸೇರಿಸಿ. ನಂತರ, ಗರಂ ಮಸಾಲ, ಕಾರದ ಪುಡಿ, ಜೀರಿಗೆ ಪುಡಿ, ದನಿಯಾ ಪುಡಿ, ಚಾಟ್ ಮಸಾಲ, ಉಪ್ಪು ಮತ್ತು ಅಕ್ಕಿ ಹಿಟ್ಟು ಸೇರಿಸಿ.
3. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಕಲಸಿ ಉಂಡೆ ಮಾಡಿ.
4. ಉಂಡೆಗಳನ್ನು ವಡೆ ಆಕಾರಕ್ಕೆ ತಟ್ಟಿ ತಯಾರಿಸಿ.
5. ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ. ವಡೆಗಳನ್ನು ಎರಡು ಕಡೆ ಕೆಂಪಗಾಗುವವರೆಗೆ ಬೇಯಿಸಿರಿ.
6. ಬಿಸಿ ಬಿಸಿ ಗೆಣಸಿನ ಕಟ್ಲೆಟ್ ಅನ್ನು ಟೊಮೇಟೊ ಸಾಸ್ ಜೊತೆ ಸರ್ವ್ ಮಾಡಿ.








