Symptoms about Tomato fever | ಟೊಮೇಟೊ ಜ್ವರದ ಬಗ್ಗೆ ಎಚ್ಚರವಿರಲಿ – ರೋಗ ಲಕ್ಷಣಗಳು ಹೀಗಿವೆ
ಕೇರಳದಲ್ಲಿ ಮೇ ತಿಂಗಳಿನಲ್ಲಿ ಈ ಜ್ವರ ಪತ್ತೆ
ಮೇ ತಿಂಗಳಿಂದ ಈವರೆಗೂ 82 ಮಕ್ಕಳಲ್ಲಿ ಜ್ವರ
ದೇಹದಲ್ಲಿ ಕೆಂಪು ಬಣ್ಣದ ನೋವಿರುವ ಗುಳ್ಳೆಗಳು
ಹೆಚ್ಚು ಜ್ವರ ಮತ್ತು ಕೀಲು ನೋವು, ಆಯಾಸ
ಜಗತ್ತು ಇನ್ನೂ ಕೊರೊನಾ ಸೋಂಕಿನಿಂದ ತತ್ತಿರಿಸುತ್ತಿದ್ದು, ಮಂಕೀಪಾಕ್ಸ್ ಭೀತಿಯೂ ಎಲ್ಲರಲ್ಲೂ ಮೂಡಿದೆ. ಈ ನಡುವೆ ಟೊಮ್ಯಾಟೋ ಜ್ವರ ಜನರ ನಿದ್ದೆಗೆಡಿಸಿದೆ.
ಮೇ ತಿಂಗಳಲ್ಲಿ ಕೇರಳದಲ್ಲಿಪತ್ತೆಯಾದ ಈ ರೋಗ, ಕಾಲು ಬಾಯಿ ರೋಗದ ಹೊಸ ರೂಪಾಂತರವಾಗಿದೆ ಎಂಬ ಭೀತಿಯನ್ನು ಸೃಷ್ಟಿಸಿದೆ. ಮೇ ತಿಂಗಳಿನಿಂದ ಇಲ್ಲಿಯವರೆಗೆ 82 ಮಕ್ಕಳಲ್ಲಿ ಈ ಜ್ವರ ಕಾಣಿಸಿಕೊಂಡಿದೆ.
ಟೊಮ್ಯಾಟೋ ಜ್ವರ ಎಂದರೇ ದೇಹದಲ್ಲಿ ಕೆಂಪುಬಣ್ಣದ ನೋವಿರುವ ಗುಳ್ಳೆಗಳು ಕಂಡು ಬರುತ್ತವೆ. ಕ್ರಮೇಣ ಆ ಗುಳ್ಳೆಗಳು ಟೊಮ್ಯಾಟೋ ಗ್ರಾತಕ್ಕೆ ಹಿಗ್ಗುತ್ತವೆ. ಹೀಗಾಗಿ ಈ ಜ್ವರವನ್ನು ಟೊಮ್ಯಾಟೋ ಜ್ವರ ಎಂದು ಕರೆಯಲಾಗುತ್ತದೆ.
ಇದರ ರೋಗ ಲಕ್ಷಣಗಳು ಹೀಗಿವೆ
ರೋಗಿಗಳಲ್ಲಿ ಹೆಚ್ಚು ಜ್ವರ ಮತ್ತು ಕೀಲು ನೋವು, ಆಯಾಸ, ಅನಾರೋಗ್ಯ ಮತ್ತು ಅತಿಸಾರ ಕಂಡುಬಂದಿದೆ.
ಇದು ಸಾಂಕ್ರಾಮಿಕ ರೋಗ ಎಂದು ವೈದ್ಯರು ತಿಳಿಸಿದ್ದು, ವಯಸ್ಕರಲ್ಲೂ ಕಂಡುಬರಬಹುದು ಎಂದು ಎಚ್ಚರಿಸಿದ್ದಾರೆ.
ಇನ್ನು ಈ ರೋಗ ಕಂಡು ಬಂದಾಗ ರೋಗಿಯನ್ನ ಐದರಿಂದ ಏಳು ದಿನಗಳವರೆಗೆ ಪ್ರತ್ಯೇಕಿಸಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು.
ಹೆಚ್ಚಿನ ಪ್ರಮಾಣದಲ್ಲಿ ದ್ರವಾಹಾರಗಳನ್ನು ಸೇವಿಸಬೇಕು ಮತ್ತು ಪ್ಯಾರಸಿಟಮಲ್ ಅನ್ನು ತೆಗೆದುಕೊಳ್ಳಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಈ ವೈರಸ್ ಜೀವಕ್ಕೆ ಅಪಾಯಕಾರಿ ಅಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.