ಕಿಡ್ನಿ ಸಮಸ್ಯೆಯ ಲಕ್ಷಣಗಳು ಏನು..?

1 min read
Kidney

ಕಿಡ್ನಿ ಸಮಸ್ಯೆಯ ಲಕ್ಷಣಗಳು ಏನು..? Symptoms of #Kidney Problems

ಕಿಡ್ನಿ ( ಮೂತ್ರಪಿಂಡ) ನಮ್ಮ ದೇಹದ ಪ್ರಮುಖ ಅವಯವಗಳಲ್ಲಿ ಒಂದು… ನಮ್ಮ ದೇಹದಲ್ಲಿ ವಿಷ ತ್ಯಾಜ್ಯ ಪದಾರ್ಥಗಳನ್ನು ಆಚೆ ಹಾಕುವಲ್ಲಿ ಮೂತ್ರಪಿಂಡಗಳು ಸಹಕರಿಸುತ್ತವೆ.

ಆದ್ರೆ ಇತ್ತೀಚೆಗೆ ಕಿಡ್ನಿ ಸಮಸ್ಯೆಗಳು ಸಾಮಾನ್ಯವಾಗಿ ಬಿಟ್ಟಿವೆ. ಸಣ್ಣವರಿಂದ ದೊಡ್ಡವರವರೆಗೆ ಎಲ್ಲರಲ್ಲೂ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಮೂತ್ರಪಿಂಡಕ್ಕೆ ಸೋಂಕು ತಗುಲಿದರೆ ಅನೇಕ ವಿಧದ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಇವು ಮರಣಕ್ಕೂ ದಾರಿ ಮಾಡಿಕೊಡಬಹುದು

ನಮ್ಮಲಿ ಕಿಡ್ನಿ ಸಮಸ್ಯೆ ಉಂಟಾದಲ್ಲಿ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.. ಆಗ ನಾವು ಅದನ್ನು ಗಮನಿಸಿ ಆಗಲೇ ಚಿಕಿತ್ಸೆ ಪಡೆದರೆ ಕಿಡ್ನಿ ವೈಫಲ್ಯತೆಯನ್ನು ಸೂಕ್ತ ಚಿಕಿತ್ಸೆಯಿಂದ ಪರಿಹಾರ ಮಾಡಿಕೊಳ್ಳಬಹುದು.

Kidney

ಕಿಡ್ನಿ ವೈಫಲ್ಯತೆ ಲಕ್ಷಣಗಳೇನು..?
* ಯಾವಾಗ ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ, ಆಗ ಮೂತ್ರದ ಬಣ್ಣ ಬದಲಾಗುತ್ತದೆ.
* ಮೂತ್ರದಲ್ಲಿ ವಾಸನೆ ಅಥವ ಮೂತ್ರದ ಬಣ್ಣ ಬದಲಾಗುವುದು.
* ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು
* ಮೂತ್ರದ ಬಣ್ಣ ಕಪ್ಪು ಕೇಸರಿ, ಗೋಧಿ ಬಣ್ಣಕ್ಕೆ ತಿರುಗುತ್ತವೆ
* ಕಿಡ್ನಿ ವೈಫಲ್ಯತೆ ಇದ್ದರೆ ಬೆನ್ನು ವಿಪರೀತ ನೋಯುತ್ತಾ ಇರುತ್ತದೆ.
* ಕಿಡ್ನಿ ವೈಫಲ್ಯ ಇದ್ದರೆ ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ.
* ಬೆನ್ನಿನ ಕೆಳಭಾಗದಲ್ಲಿ ಚುಚ್ಚುವ ಅನುಭವ ಅಥವಾ ತುಂಬಾ ನೋವು.
* ನಾಲಿಗೆಗೆ ರುಚಿ ಗೊತ್ತಾಗದೆ ಇರುವುದು.
* ಉಸಿರಾಡುವುದಕ್ಕೆ ತುಂಬ ಕಷ್ಟ ಆಗುವುದು.
* ನೆನಪಿನ ಶಕ್ತಿ ಕುಂದುವುದು.
* ವಾತಾವರಣ ಬೆಚ್ಚಗೆ ಇದ್ದರೂ ಕೂಡ ಚಳಿಯ ಅನುಭವ ಆಗುತ್ತಾ ಇರುವುದು.
* ಹೊಟ್ಟೆ ನೋವು, ವಿಪರೀತ ವಾಂತಿ, ಬಿಟ್ಟು ಬಿಟ್ಟು ಜ್ವರ ಬರುವುದು.

ಇಂತಹ ಎಲ್ಲಾ ಲಕ್ಷಣಗಳು ಕಿಡ್ನಿ ವೈಫಲ್ಯವಾದಾಗ ಕಾಣಿಸಿಕೊಳ್ಳುತ್ತದೆ. ಈ ರೀತಿಯ ಲಕ್ಷಣಗಳು ಕಂಡು ಬಂದಾಗ ತಕ್ಷಣವೇ ವೈದ್ಯರ ಭೇಟಿ ನೀಡಿ ಚಿಕಿತ್ಸೆ ಪಡೆಯುವುದು ಸೂಕ್ತ.

ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd